

ರಾಧಾಕೃಷ್ಣ ಕಾರ್ಗಲ್
ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಆಗಮಿಸುವ ಬಹುಪಾಲು ಪ್ರವಾಸಿಗರ ೆವರೀಟ್ ಸ್ಪಾಟ್ ನಿಪ್ಲಿ ಾಲ್ಸ್. ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಹಾಗೂ ಯುವಜನರನ್ನು ಸೆಳೆಯುತ್ತಿರುವ ಆಕರ್ಷಕ ತಾಣವಾಗಿ ರೂಪುಗೊಂಡಿದೆ ಈ ಪ್ರವಾಸಿ ತಾಣ.
ಜೋಗ ಜಲಪಾತ ಶಿವಮೊಗ್ಗ ಜಿಲ್ಲೆಯ ಕೊನೇ ಪ್ರದೇಶವಾಗಿ ಗುರುತಿಸಿಕೊಂಡಿದ್ದು, ಉತ್ತರ ಕನ್ನಡ ಜಿಲ್ಲೆಯ ಗಡಿ ಹಂಚಿಕೊಂಡಿದೆ. ಮೂಲತಃ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಸಮೀಪದ ಹುಸೂರು ಗ್ರಾಮದ ಸರಹದ್ದಿನಲ್ಲಿದೆ ಈ ಜಲಪಾತ. ನಿಪ್ಲಿ ಜಲಪಾತವು ಜೋಗ ಜಲಪಾತದಿಂದ ಕೇವಲ 8 ಕಿ.ಮೀ. ದೂರದಲ್ಲಿದೆ.
ಪ್ರವಾಸಕ್ಕೆ ಬರುವ ಹೆಚ್ಚಿನ ಪ್ರವಾಸಿಗರಿಗೆ ನೀರಿನಲ್ಲಿ ಇಳಿದು ಆಟವಾಡುತ್ತ ಮನರಂಜನೆ ಪಡೆಯಬೇಕು ಎನ್ನುವ ಉದ್ದೇಶ ಇರುತ್ತದೆ. ಆದರೆ ಜೋಗ ಜಲಪಾತದ ಪ್ರದೇಶದಲ್ಲಿ ನೀರಿನ ಬಳಿ ಸಾಗಲು ಅವಕಾಶ ಇಲ್ಲ. ಈ ಕಾರಣಕ್ಕೆ ನಿಪ್ಲಿ ಫಾಲ್ಸ್ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸಿ ಪ್ರಾಮುಖ್ಯತೆ ಪಡೆದುಕೊಂಡಿದೆ.
ಹಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಸುತ್ತಮುತ್ತಲಿನ ಗ್ರಾಮಗಳಿಗೆ ಬೇಸಿಗೆ ವೇಳೆ ಕಾಲುವೆ ಮೂಲಕ ಬೆಳೆಗಳಿಗೆ ನೀರುಣಿಸಲು ನಿರ್ಮಾಣ ಮಾಡಲಾಗಿರುವ ಕಿರಿದಾದ ಡ್ಯಾಂ ಇಲ್ಲಿನ ಹುಸೂರು ಅಣೆಕಟ್ಟು. ಡ್ಯಾಂ ಭರ್ತಿಯಾಗಿ ಹೆಚ್ಚುವರಿ ನೀರು ಕೋಡಿ ಬಿದ್ದಾಗ ಸಮತಟ್ಟಾದ ಬಯಲು ಪ್ರದೇಶದಲ್ಲಿ ಹರಿಯುತ್ತದೆ. ಸಮತಟ್ಟಿನಲ್ಲಿ ಹರಿಯುವ ನೀರಿನಲ್ಲಿ ಇಳಿದು ಪ್ರವಾಸಿಗರು ಆಟವಾಡುತ್ತಾರೆ.
ಪ್ರಸ್ತುತ ಮಳೆ ಜಾಸ್ತಿ ಇದ್ದು, ನೀರಿನ ಸೆಳೆತ ಜಾಸ್ತಿ ಇರುವ ಕಾರಣಕ್ಕೆ ಅಪಾಯವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಯಾರೂ ಹೋಗದಂತೆ ಹಗ್ಗ ಅಡ್ಡ ಕಟ್ಟಲಾಗಿದೆ. ಒಂದಿಷ್ಟು ಹೊತ್ತು ಪ್ರವಾಸಿಗರಿಗೆ ಆಟವಾಡಿ ಸಂತಸ ಅನುಭವಿಸುವವರಿಗೆ ಪ್ರಕೃತಿಯಲ್ಲಿರುವ ಅದ್ಭುತ ತಾಣ ನಿಪ್ಲಿ ಾಲ್ಸ್.
ಸುರಕ್ಷತೆ ದೃಷ್ಟಿಯಿಂದ ಕ್ಯಾಮರಾ ಅಳವಡಿಕೆ ಪ್ರಸ್ತುತ ಸಾಕಷ್ಟು ನೀರು ಹರಿಯುತ್ತಿರುವುದರಿಂದ ನಿತ್ಯ ಪ್ರವಾಸಿಗರ ಆಗಮನ ಆಗುತ್ತಿದೆ. ಶನಿವಾರ ಮತ್ತು ಭಾನುವಾರ ಹಾಗೂ ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರ ಹಿತದೃಷ್ಟಿಯಿಂದ ಅಗತ್ಯ ಸ್ಥಳಗಳಲ್ಲಿ ಎರಡು ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಓರ್ವ ಪೊಲೀಸ್ ಸಿಬ್ಬಂದಿ ಅಥವಾ ಗೃಹರಕ್ಷಕ ದಳ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಆಕರ್ಷಣೆ ತಾಣದಲ್ಲಿ ಸುರಕ್ಷತೆಗೂ ಆದ್ಯತೆ ನೀಡಲಾಗಿದ್ದು, ದಿನೇ ದಿನೆ ಪ್ರವಾಸಿಗರ ಸಂಖ್ಯೆ ಹೆಚ್ಚತೊಡಗಿದೆ.
ಹದಿನೈದು ವಿದ್ಯಾರ್ಥಿಗಳು ಪ್ರವಾಸಕ್ಕೆ ಮೊದಲ ಬಾರಿ ನಿಪ್ಲಿ ಜಲಪಾತ ನೋಡಲು ಬಂದಿದ್ದು, ನೀರಿನಲ್ಲಿ ಆಟವಾಡಿ ಎಂಜಾಯ್ ಮಾಡಲು ಉತ್ತಮ ಸ್ಥಳವಾಗಿದೆ. ಪ್ರಾಕೃತಿಕವಾಗಿ ಅದ್ಭುತ ಪ್ರವಾಸಿ ತಾಣ ನಿಪ್ಲಿ ಾಲ್ಸ್. ಪೂಜಾ, ಡೆಂಟಲ್ ಕಾಲೇಜು ಪ್ರಥಮ ವರ್ಷದ ವಿದ್ಯಾರ್ಥಿನಿ, ಬೆಂಗಳೂರು ಮಳೆಗಾಲದ ಸಂದರ್ಭದಲ್ಲಿ ಮಾತ್ರ ಇಲ್ಲಿ ನೀರು ಹಾಗೂ ಪ್ರವಾಸಿಗರ ಓಡಾಟ ಇರುತ್ತದೆ. ಎರಡು ಅಂಗಡಿ ಗುತ್ತಿಗೆ ಪಡೆದಿದ್ದು, ಒಂದು ಅಂಗಡಿಯಿಂದ 40 ಸಾವಿರ ರೂ. ಹಣವನ್ನು ಸ್ಥಳೀಯ ಗ್ರಾಮ ಪಂಚಾಯಿತಿಗೆ ನೀಡಬೇಕು. ವ್ಯಾಪಾರ ಆಗೋದು ಮಳೆಗಾಲದ ಸೀಸನ್‌ನಲ್ಲಿ ಮಾತ್ರ. ಕುಮಾರ್, ಅಂಗಡಿ ಗುತ್ತಿದಾರ ತಲುಪುವುದು ಹೇಗೆ? ಬೆಂಗಳೂರು ಮತ್ತು ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206ರ ಆಡುಕಟ್ಟಾದಲ್ಲಿ ಬಲಕ್ಕೆ ತಿರುಗಿ ಕೇವಲ 4 ಕಿ.ಮೀ. ಸಾಗಿದರೆ ಅಥವಾ ಜೋಗದಿಂದ ಮಾವಿನಗುಂಡಿ ಮಾರ್ಗದಲ್ಲಿ ತೆರಳುವವರಿಗೆ, ಸಿದ್ದಾಪುರ ರಸ್ತೆ ಮಾರ್ಗವಾಗಿ ತೆರಳುವವರಿಗೆ ಹಲಗೇರಿಯಲ್ಲಿ ಬಲಕ್ಕೆ ತಿರುಗಿ ಕೇವಲ 1 ಕಿ.ಮೀ. ಸಾಗಿದರೆ ನಿಪ್ಲಿ ಜಲಪಾತ ಕಾಣಿಸುತ್ತದೆ.