ಪ್ರವಚನ ಆಲಿಸುವ ಪ್ರವೃತ್ತಿ ಬೆಳೆಸಿಕೊಳ್ಳಲಿ

10Kakamari1
Published on

ಕಕಮರಿ: ಸಂತ ಶರಣರ ನುಡಿ ಹಾಗೂ ಪ್ರವಚನ ಆಲಿಸುವ ಮೂಲಕ ಜೀವನ ಪಾವನಗೊಳಿಸಿಕೊಳ್ಳಬೇಕು ಎಂದು ಕಲಬುರಗಿ ಸವಿತಾ ಪೀಠದ ಸವಿತಾನಂದ ಸ್ವಾಮೀಜಿ ಹೇಳಿದರು.

ಸ್ಥಳೀಯ ಗುರುದೇವಾಶ್ರಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವೇದಾಂತ ಕೇಸರಿ ಮಲ್ಲಿಕಾರ್ಜುನ ಮಹಾಶಿವಯೋಗಿಗಳ ಸ್ಮರಣೋತ್ಸವ ಹಾಗೂ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿ, ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಪ್ರವಚನ ಕೇಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೊಪ್ಪಳ ಬಸವಶ್ರೀ ಆಶ್ರಮದ ಯಶವಂತ ದೇವರು ಮಾತನಾಡಿದರು. ಆತ್ಮಾರಾಂ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೈವಲ್ಯಾನಂದ ಸ್ವಾಮೀಜಿ, ತಾರಾಚಂದ ಮಹಾರಾಜರು, ಬಾಬುರಾವ ಮಹಾರಾಜರು, ಗುಂಡಯ್ಯ ಸ್ವಾಮೀಜಿ, ವಿವೇಕಾನಂದ ಮಹಾರಾಜರು, ಗಂಗಣ್ಣ ಮಹಾರಾಜರು, ಕೊಕಟನೂರ ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ, ಸಿದ್ದಪ್ಪ ಬಿದರಿ, ಅಪ್ಪುಗೌಡ ಪಾಟೀಲ, ಎ.ಜಿ.ವಾಲಿ, ಸದಾಶಿವ ದಾಶ್ಯಾಳ, ಸಿದ್ರಾಮ ಬಿಳ್ಳೂರ, ಗಿರಮಲ್ಲ ಜನಗೌಡ, ಗುರುರಾಜ ಕಾಮನ, ಯಂಕಪ್ಪ ಅಸ್ಕಿ ಇತರರಿದ್ದರು. ಎಂ.ಬಿ.ಕರಡಿ ಸ್ವಾಗತಿಸಿದರು. ಮಹಾಂತೇಶ ಮಠಪತಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net