ಪ್ರವಚನ ಆಲಿಕೆಯಿಂದ ಜೀವನದಲ್ಲಿ ನೆಮ್ಮದಿ

4
ಕಟಗೇರಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಪ್ರವಚನ ಸಮಾರೋಪ ಸಮಾರಂಭದಲ್ಲಿ ಮರುಳಸಿದ್ಧ ದೇವರನ್ನು ಸತ್ಕರಿಸಲಾಯಿತು. ಸಿದ್ಧಲಿಂಗ ಸ್ವಾಮೀಜಿ, ಬಸಪ್ಪ ಮಗದುಮ್ಮ, ಬಸಪ್ಪ ಗಣಿ ಇತರರಿದ್ದರು.
Published on


ಅಥಣಿ ಗ್ರಾಮೀಣ: ಪುರಾಣ, ಪ್ರವಚನ ಆಲಿಸಿದರೆ ಬದುಕಿನಲ್ಲಿ ನೆಮ್ಮದಿ ದೊರೆಯಲಿದೆ ಎಂದು ಅಥಣಿ ಶೆಟ್ಟರಮಠದ ಮರುಳಸಿದ್ಧ ದೇವರು ಹೇಳಿದರು.

ಅಥಣಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಪ್ರವಚನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ನದಿ ಇಂಗಳಗಾಂವದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಶರಣರು ಸಮಾನತೆಯ ಸಮಾಜ ನಿರ್ಮಾಣ ಮಾಡಲು ಶ್ರಮಿಸಿ, ನುಡಿದಂತೆ ನಡೆದು ಅಮರರಾಗಿದ್ದಾರೆ ಎಂದರು.

ಶ್ರಾವಣ ಮಾಸದ ಪ್ರಯುಕ್ತ ಕದಳಿ ಕರ್ಪೂರ ಎಂಬ ಅಕ್ಕ ಮಹಾದೇವಿಯ ಜೀವನ ಚರಿತ್ರೆ ಕುರಿತು ಪ್ರವಚನ ನೀಡಲಾಯಿತು. ನಿತ್ಯ ಅನ್ನ ದಾಸೋಹ, ಭಜನೆ, ಗಾನಯೋಗಿ ಪಂಚಾರಿ ಗವಾಯಿಗಳ ಕಲಾ ತಂಡದವರಿಂದ ಸಂಗೀತ ಕಾರ್ಯಕ್ರಮ ಜರುಗಿದವು. ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿದವರನ್ನು ಸತ್ಕರಿಸಲಾಯಿತು.

ಬಸಪ್ಪ ಮಗದುಮ್ಮ, ಗ್ರಾಪಂ ಅಧ್ಯ ಗುರುಪಾದ ಸವದಿ, ಪಿಕೆಪಿಎಸ್​ ಅಧ್ಯ ಬಸಪ್ಪ ಗಣಿ, ಶ್ರೀಶೈಲ ಅಂದಾನಿ, ಮಲ್ಲಪ್ಪ ಕಳ್ಳಿ, ಚನ್ನಗೌಡ ಇಮಗೌಡರ, ನಿಂಗಪ್ಪ ಮಂಟೂರ, ರಾವಸಾಬ ಜಗತಾಪ, ಗುರುಶಾಂತ ಕರಡಿಮಠ, ನರಸಪ್ಪ ಮಹಿಷವಾಡಗಿ, ಶಿವಪುತ್ರ ಪೂಜಾರಿ, ಸುರೇಶ ಮಗದುಮ್ಮ, ಸಿದ್ಧಪ್ಪ ಪೂಜಾರಿ, ಮಲ್ಲಯ್ಯ ಮಠಪತಿ, ಶ್ರೀಶೈಲ ನಿಂಗನೂರ, ಸದಾಶಿವ ಕನಾಳ, ಪ್ರಕಾಶ ಪೂಜಾರಿ, ಶಿವಾನಂದ ಮಹಿಷವಾಡಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net