ಪ್ರಯೋಗಾಲಯ ಉದ್ಘಾಟನೆ

20 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ಪೇಸ್ ಇ ಸ್ಕಾಲರ್ ಮತ್ತು ಹಿಮಾಲಯನ್ ಬಾಹ್ಯಾಕಾಶ ಕೇಂದ್ರದ ವತಿಯಿಂದ ಬಾಹ್ಯಾಕಾಶ ಮತ್ತು ಖಗೋಳವಿಜ್ಞಾನ ಪ್ರಯೋಗಾಲಯದ ಉದ್ಘಾಟನೆ ಕಾರ್ಯಕ್ರಮವನ್ನು ಸೆ. 22 ಮತ್ತು 23ರಂದು ಏರ್ಪಡಿಸಲಾಗಿದೆ ಎಂದು ಹಿಮಾಲಯನ್ ಸ್ಪೇಸ್ ಸೆಂಟರ್ ಸಹ ಸಂಸ್ಥಾಪಕ ವೀರೇಶ ಪಾಟೀಲ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 22ರಂದು ಮಧ್ಯಾಹ್ನ 1 ಗಂಟೆಗೆ ಇಲ್ಲಿನ ಆರ್.ಎನ್. ಶೆಟ್ಟಿ ಕ್ರೀಡಾಂಗಣ ಎದುರಿನ ಸರ್ಕಾರಿ ಪ್ರೌಢಶಾಲೆಯಲ್ಲಿನ ಪ್ರಯೋಗಾಲಯವನ್ನು ಶಾಸಕ ಅರವಿಂದ ಬೆಲ್ಲದ ಉದ್ಘಾಟಿಸುವರು. ಸೆ. 23ರಂದು ಬೆಳಗ್ಗೆ 9.30ಕ್ಕೆ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿನ ಪ್ರಯೋಗಾಲಯವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು ಎಂದರು.
ಸ್ಪೇಸ್ ಇ ಸ್ಕಾಲರ್ ಮತ್ತು ಹಿಮಾಲಯನ್ ಬಾಹ್ಯಾಕಾಶ ಕೇಂದ್ರದ ವತಿಯಿಂದ ಜಿಲ್ಲೆಯ ಪ್ರತಿ ತಾಲೂಕಿನ ಒಂದು ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಬಾಹ್ಯಾಕಾಶ ಮತ್ತು ಖಗೋಳವಿಜ್ಞಾನ ಪ್ರಯೋಗಾಲಯ ಸ್ಥಾಪಿಸಲು ನಿರ್ಧರಿಸಲಾಗಿದೆ. ಇದರಿಂದ ಗ್ರಾಮೀಣ ಹಾಗೂ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ಮತ್ತು ಖಗೋಳವಿಜ್ಞಾನ ಅಧ್ಯಯನದ ಬಗ್ಗೆ ತಿಳಿಯಲು ಸಹಾಯಕವಾಗಲಿದೆ ಎಂದರು.
ಶ್ರೀದೇವಿ ರೂಗಿ, ಓಟಿಲಿ ಅನ್ಬನ್‌ಕುಮಾರ, ಶ್ರೀದೇವಿ ಲದ್ದಿಮಠ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net