

ಚಿಕ್ಕಮಗಳೂರು: ಬೇರೆ ಬೇರೆ ರೀತಿಯ ಪ್ರಯೋಗಗಳನ್ನು ಮಾಡುವ ಮೂಲಕ ಕಾಫಿಯ ಮೌಲ್ಯವರ್ಧನೆ ಮಾಡಬೇಕಿದೆ. ಆರಂಭದಲ್ಲಿ ಇದು ಬೆಳೆಗಾರರಿಂದ ಸಾಧ್ಯವಿಲ್ಲ. ಹೀಗಾಗಿ ಆರಂಭಿಕವಾಗಿ ಸರ್ಕಾರ ಇದಕ್ಕೆ ನೆರವು ನೀಡಬೇಕು. ಪ್ರಯೋಗಗಳು ಒಂದು ಹಂತಕ್ಕೆ ಬಂದ ಬಳಿಕ ಸರ್ಕಾರದ ಸಹಕಾರವನ್ನು ಬೆಳೆಗಾರರು ನಿರೀಕ್ಷಿಸುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಭಿಪ್ರಾಯಪಟ್ಟರು.
ನಗರದ ಆಜಾದ್ ಪಾರ್ಕ್ನಲ್ಲಿ ಬುಧವಾರ ಜಿಲ್ಲಾ ಬೆಳೆಗಾರರ ಸಂಘದಿAದ ಆಯೋಜಿಸಲಾಗಿದ್ದ ಅಂತರಾಷ್ಟಿçÃಯ ಕಾಫಿ ದಿನಾಚರಣೆ ಕಾರ್ಯಕ್ರಮದ ಜಾಥ ಉದ್ಘಾಟಿಸಿ ಮಾತನಾಡಿದ ಅವರು, ಕಾಫಿ ಮೌಲವರ್ಧನೆಗೆ ಸರ್ಕಾರದ ನೆರವಿಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸುವ ಭರವಸೆ ನೀಡಿದರು.
ಕೇವಲ ಸಭಾ ಕಾರ್ಯಕ್ರಮಗಳ ಬದಲಿಗೆ ಒಂದು ವಾರದ ಕಾಫಿ ಹಬ್ಬ ನಡೆಸೋಣ. ಈ ಮೂಲಕ ಹೊರಗಿನವರಿಗೆ ಕಾಫಿ ಹೇಗೆ ಬೆಳೆದು ಬಂತು ಎನ್ನುವುದನ್ನು ಪರಿಚಯಿಸೋಣ. ಆಗ ಕಾಫಿಗೂ ಒಂದು ಬೆಲೆ ಬರುತ್ತದೆ ಹಾಗೂ ಜಿಲ್ಲೆಯ ಪ್ರವಾಸೋದ್ಯಮವೂ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಬೆಳೆಗಾರರೂ ಸೇರಿ ಚಿಂತನೆ ನಡೆಸೋಣ ಎಂದು ಕರೆ ನೀಡಿದರು.
ಕಾಫಿ ಎನ್ನುವುದು ಒಂದು ಸಂಸ್ಕೃತಿ. ಅದನ್ನು ನಾವು ಉಳಿಸಿಕೊಂಡು ಹೋಗಬೇಕಾಗಿದೆ. ಇಲ್ಲದಿದ್ದಲ್ಲಿ ನಮ್ಮ ಸಂಸ್ಕೃತಿಯೂ ಇಲ್ಲ, ಕಾಫಿಯೂ ಇಲ್ಲ, ನಾವೂ ಇಲ್ಲ ಎನ್ನುವ ಸ್ಥಿತಿ ಬರುತ್ತದೆ. ಇಂದು ದುಡ್ಡಿದ್ದವರು ಕಾಫಿ ತೋಟ ಖರೀದಿ ಮಾಡುತ್ತಿದ್ದಾರೆ. ಆರಂಭದಲ್ಲಿ ವಾರಕ್ಕೊಮ್ಮೆ ಬರುವ ಶ್ರೀಮಂತರು ಬಳಿಕ ತಿಂಗಳಿಗೆ ಹಾಗೂ ವರ್ಷಕ್ಕೊಮ್ಮೆ ಬರಲಾರಂಭಿಸುತ್ತಾರೆ. ಕಾಲಕ್ರಮೇಣ ಅವರ ಕಾಫಿ ತೋಟಗಳು ಹಾಳು ಬೀಳುತ್ತವೆ. ಇದಕ್ಕೆ ಕಾಫಿ ಬೆಳೆಗಾರರು ಕಾಫಿ ತೋಟಗಳನ್ನು ಮಾರಾಟ ಮಾಡಬಾರದು ಎಂದು ಮನವಿ ಮಾಡಿದರು.
ಅಂತರಾಷ್ಟಿçÃಯ ಕಾಫಿ ದಿನದಂದು ಕಾಫಿ ಕಾರ್ಮಿಕರನ್ನು ಸನ್ಮಾನಿಸಿರುವುದು ಸ್ವಾಗತಾರ್ಹ. ಕಾರ್ಮಿಕರು ನಮ್ಮ ಮನೆಯ ಕೆಲಸದವರಾದರೂ ವಯಸ್ಸಿನಲ್ಲಿ ನಮಗಿಂತ ಹಿರಿಯರಾಗಿದ್ದಾಗ ನಾವು ನಮ್ಮ ತಂದೆ, ತಾಯಿ, ಅಣ್ಣ, ಅಕ್ಕನಿಗೆ ಹೇಗೆ ಗೌರವ ನೀಡುತ್ತೇವೆಯೋ ಹಾಗೆಯೇ ಅವರಿಗೂ ಗೌರವ ನೀಡಬೇಕು. ಕಾರ್ಮಿಕರು ಕೇವಲ ಸಂಬಳವನ್ನು ಮಾತ್ರವಲ್ಲ ಗೌರವವನ್ನೂ ನಿರೀಕ್ಷೆ ಮಾಡುತ್ತಾರೆ ಎಂದರು.
ಮಾಲೀಕ ಹಾಗೂ ಕಾರ್ಮಿಕ ಒಂದೇ ನಾಣ್ಯದ ಎರಡು ಮುಖಗಳು. ಕಾರ್ಮಿಕನಿಲ್ಲದೆ ಮಾಲೀಕನೂ ಇಲ್ಲ. ಹಾಳೂರಿಗೆ ಉಳಿದವನೇ ಗೌಡನಾದರೆ ಅದಕ್ಕೆ ಬೆಲೆ ಇರುವುದಿಲ್ಲ. ತುಂಬಿದ ಊರಿನಲ್ಲಿ ಗೌರವ ಕೊಡುವ ಜನರಿದ್ದಾಗ ಮಾತ್ರ ಗೌಡಿಕೆಗೆ ಬೆಲೆ ಬರಲು ಸಾಧ್ಯ. ಕೇವಲ ವ್ಯವಹಾರವೇ ಸಂಬAಧವಾದಾಗ ಅದು ಹೆಚ್ಚು ದಿನ ಉಳಿಯುವುದಿಲ್ಲ. ಬದಲಿಗೆ ಪಾರಿವಾರಿಕ ಸಂಬAಧ ಮಾತ್ರ ನಿರಂತರವಾಗಿ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಶಾಸಕ ಎಚ್.ಡಿ.ತಮ್ಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಫಿ ಬೆಲೆ ಏರು ಪೇರಾದರೂ ಗೊಬ್ಬರ, ಕಾರ್ಮಿಕರ ವೇತನ ಇನ್ನಿತರೆ ನಿರ್ವಹಣಾ ವೆಚ್ಚ ಏರು ಪೇರು ಆಗುವುದಿಲ್ಲ. ಸಧ್ಯಕ್ಕೆ ಕಾಫಿ ಬೆಲೆ ಉತ್ತಮವಾಗಿದ್ದರೂ ಅದು ಹೀಗೇ ಇರುತ್ತದೆ ಎಂದು ಹೇಳಲಾಗುವುದಿಲ್ಲ ಎಂದರು.
ಅರಣ್ಯ ಮತ್ತು ಕಂದಾಯ ಇಲಾಖೆಗಳಿಂದ ಜಂಟೀ ಸರ್ವೇ ಕಾರ್ಯ ನಡೆಯುವವರೆಗೆ ಕಾಫಿ ಒತ್ತುವರಿ ಸಮಸ್ಯೆ ಬಗೆಹರಿಸಲು ಆಗುವುದಿಲ್ಲ. ಡೀಮ್ಡ್ ಫಾರೆಸ್ಟ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ಮಾತನಾಡಿ, ೧೯೨೫ ರಲ್ಲಿ ಅಂರತರಾಷ್ಟಿçÃಯ ಕಾಫಿ ಸಂಶೋಧನಾ ಕೇಂದ್ರ ಆರಂಭವಾಗಿದ್ದು ಇದೀಗ ೧೦೦ ವರ್ಷ ತುಂಬುತ್ತಿದೆ. ಅದರ ಸಂಭ್ರವನ್ನು ನ. ೬ರಿಂದ ೯ರವರೆಗೆ ನಡೆಸಲಾಗುವುದು ಎಂದರು.
ಪ್ರತಿ ವರ್ಷ ದೇಶದ ಬೊಕ್ಕಸಕ್ಕೆ ಸುಮಾರು ೧೫ ಸಾವಿರ ಕೋಟಿ ರೂ. ಆದಾಯ ಕಾಫಿ ಉದ್ಯಮದಿಂದ ಸಂದಾಯವಾಗುತ್ತಿದೆ. ವರ್ಷ ಪೂರ್ತಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುತ್ತಿದೆ. ಕಾಫಿ ಕೃಷಿಯಲ್ಲಿ ಹೊಸ ತಳಿಗಳ ಪರಿಚಯ ಮತ್ತು ಯಾಂತ್ರೀಕರಣ ಅಗತ್ಯವಾಗಿ ಆಗಬೇಕಿದೆ. ಕಾಫಿ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳ ನಡುವೆ ಯುವ ಜನತೆ ಉದ್ಯಮಕ್ಕೆ ಬರದಿದ್ದಲ್ಲಿ ತೊಂದರೆ ಶತಸಿದ್ಧ. ಕಾಫಿ ಸಂಬAಧ ಬರುತ್ತಿರುವ ಕಠಿಣ ಕಾನೂನುಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು.
ಚಿತ್ರ ನಟಿ ಶಮಿತಾ ಗೌಡ ಮಾತನಾಡಿದರು. ಕೆರೆಮಕ್ಕಿ ಮಹೇಶ್ ಸ್ವಾಗತಿಸಿ, ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಯು.ರತೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಾಗರೀಕ ಮತ್ತು ರೈತ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಸ್.ವಿಜಯಕುಮಾರ್, ಮಕ್ಕಳ ತಜ್ಞ ಡಾ.ಜೆ.ಪಿ ಕೃಷ್ಣೇಗೌಡ, ಪ್ರಮುಖರಾದ ಡಾ.ಡಿ.ಎಲ್.ವಿಜಯಕುಮಾರ್, ಪವಿತ್ರಾ ಹಳೇಕೋಟೆ, ಟಿ.ರಾಜಶೇಖರ್, ಕಾಫಿ ಎಚ್.ಎಚ್.ದೇವರಾಜ್, ಬಾಲಕೃಷ್ಣ, ಬಿ.ಎಸ್ ಜಯರಾಮ್. ಸುರೇಶ್, ಅಶೋಕ್, ಮನುಕುಮಾರ್, ಟಿ.ಡಿ ಮಲ್ಲೇಶ್, ದೀಪಕ್ ದೊಡ್ಡಯ್ಯ ಮತ್ತಿತರರಿದ್ದರು.
ಜೀವ ಉಳಿಸಿಕೊಳ್ಳಲು ಕಾಫಿ ತೋಟ ಬಿಡಬೇಕಾದೀತು ಎಚ್ಚರ
ಕಾಫಿ ತೋಟಗಳಿಗೆ ಕಾರ್ಮಿಕ ಕೊರತೆ ಕಾಡುತ್ತಿದೆ. ಹೀಗಾಗಿ ಅಸ್ಸಾಂ, ಪಶ್ಚಿಮ ಬಂಗಾಳದ ಹೆಸರಿನಲ್ಲಿ ಬಾಂಗ್ಲಾದ ಕಾರ್ಮಿಕರು ತೋಟಗಳಿಗೆ ಬರುತ್ತಿದ್ದಾರೆ. ಇದರಿಂದ ತಾತ್ಕಾಲಿಕವಾಗಿ ಕಾರ್ಮಿಕರ ಸಮಸ್ಯೆ ಬಗೆಹರಿದಿರಬಹುದು. ಆದರೆ ಭವಿಷ್ಯದಲ್ಲಿ ಇವರಿಂದ ಕಾನೂನು ಸುವ್ಯವಸ್ಥೆ ಹಾಗೂ ದೇಶದ ಭದ್ರತೆಗೆ ಅಪಾಯ ಬರಬಹುದು ಎಂದು ಸಿ.ಟಿ.ರವಿ ಬೆಳೆಗಾರರಿಗೆ ಎಚ್ಚರಿಕೆ ನೀಡಿದರು.
ಇಂದು ನಮ್ಮ ಕಾಫಿ ತೋಟ ಹಾಗೂ ಉದ್ಯಮವನ್ನು ಉಳಿಸಿಕೊಳ್ಳಲಿ ಬಾಂಗ್ಲಾ ಕಾರ್ಮಿಕರನ್ನು ಅವಲಂಭಿಸಿದರೆ ಭವಿಷ್ಯದಲ್ಲಿ ನಮ್ಮ ಜೀವ ಉಳಿಸಿಕೊಳ್ಳಲು ಕಾಫಿ ತೋಟ ಬಿಟ್ಟು ಓಡಿಹೋಗಬೇಕಾದ ಪರಿಸ್ಥಿತಿ ಮಾಲೀಕರಿಗೆ ಬಂದರೂ ಅಚ್ಚರಿಯಿಲ್ಲ ಎಂದರು.
ದೇಶದಲ್ಲಿ ಹಸಿರುಕ್ರಾಂತಿ ಆಗುವವರೆಗೆ ರೈತ ಸ್ವಾವಲಂಭಿಯಾಗಿದ್ದ, ದೇಶ ಆಹಾರದ ವಿಷಯದಲ್ಲಿ ಪರಾವಲಂಭಿಯಾಗಿತ್ತು. ಹಸಿರುಕ್ರಾಂತಿ ಬಳಿಕ ದೇಶ ಆಹಾರದ ವಿಷಯದಲ್ಲಿ ಸ್ವಾವಲಂಭಿಯಾಯಿತು. ಆದರೆ ರೈತ ಪರಾವಲಂಭಿಯಾಗಿದ್ದಾರೆ. ಹಿಂದೆ ಬೀಜ, ಗೊಬ್ಬರ, ಶ್ರಮ ಎಲ್ಲವೂ ರೈತನz್ದೆÃ ಆಗಿತ್ತು. ಆದರೆ ಇಂದು ಬೀಜ, ಗೊಬ್ಬರ, ಶ್ರಮ ಎಲ್ಲವನ್ನೂ ರೈತ ಖರೀದಿಸಬೇಕಾಗಿದೆ. ಇದರಿಂದ ಉತ್ಪಾದನಾ ವೆಚ್ಚ ಹೆಚ್ಚಿ ನಷ್ಟ ಅನುಭವಿಸಿ ರೈತ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಈ ಬಗ್ಗೆ ಚಿಂತನೆಗಳು ನಡೆಯಬೇಕಿದೆ.
ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ