

ಲಿಂಗದಹಳ್ಳಿ: ನಂದಿಬಟ್ಟಲು, ಸೈದುಖಾನ್, ಎನ್.ಬಿ.ಕಾಲೋನಿ ಮುಂತಾದ ಗ್ರಾಮಗಳ ಪ್ರಯಾಣಿಕರ ಅನುಕೂಲಕ್ಕಾಗಿ ಎನ್.ಬಿ.ಕಾಲೋನಿ ಗ್ರಾಮದಲ್ಲಿ ನಿರ್ಮಿಸಿದ್ದ ಪ್ರಯಾಣಿಕರ ತಂಗುದಾಣವನ್ನು ಸ್ವಚ್ಛಗೊಳಿಸಲಾಗಿದೆ.
ತಂಗುದಾಣ ಹಾಳುಬಿದ್ದಿರುವ ಕುರಿತು ಶುಕ್ರವಾರ ವಿಜಯವಾಣಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಸುದ್ದಿಯಿಂದ ಎಚ್ಚೆತ್ತುಕೊಂಡ ನಂದಿಬಟ್ಟಲು ಗ್ರಾಪಂ ಅಧ್ಯಕ್ಷ ಎನ್.ಜೆ.ಭದ್ರೇಗೌಡ ಮತ್ತು ಪಿಡಿಒ ಎನ್.ಎಸ್.ನಾಗರಾಜಪ್ಪ ಅವರು ಗ್ರಾಪಂ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ತಂಗುದಾಣದ ಮುಂಭಾಗದಲ್ಲಿದ್ದ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸಿ, ತಂಗುದಾಣ ಸ್ವಚ್ಛಗೊಳಿಸಿದರು.
ತಂಗುದಾಣದ ಸಮಸ್ಯೆ ಕುರಿತು ವರದಿ ಮಾಡಿ ಗ್ರಾಪಂ ಗಮನಸೆಳೆದ ವಿಜಯವಾಣಿ ಪತ್ರಿಕೆಗೆ ಎನ್.ಬಿ.ಕಾಲೋನಿ ಗ್ರಾಮದ ಕೃಷ್ಣಪ್ಪ ಇತರರು ಅಭಿನಂದನೆ ಸಲ್ಲಿಸಿದರು.