

ಬಣಕಲ್: ಗ್ರಾಮದಲ್ಲಿ ಪ್ರಯಾಣಿಕರ ತಂಗುದಾಣವನ್ನು ಶಾಸಕಿ ನಯನಾ ಮೋಟಮ್ಮ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಗ್ರಾಮದ ಜನರ ಹಲವು ವಷರ್ಗಳ ಬೇಡಿಕೆ ಈಗ ಈಡೇರಿದೆ. ಸಾರ್ವಜನಿಕರು ಸ್ಥಳದ ಸ್ವಚ್ಛತೆ ಕಾಪಾಡಬೇಕು ಎಂದರು. ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಝರಿನ್, ಉಪಾಧ್ಯಕ್ಷೆ ಬಿ.ಬಿ.ಲೀಲಾವತಿ, ಪಿಡಿಒ ಕಷ್ಣಪ್ಪ, ಗ್ರಾಪಂ ಸದಸ್ಯರಾದ ಅತೀಕ ಬಾನು, ರ್ಇಾನ್, ಸಿರಾಜ್, ವಿನಯ್, ಮಧುಕುಮಾರ್, ಸ್ಥಳೀಯರಾದ ದಿಲ್ದಾರ್ ಬೇಗಂ, ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಸುಬ್ರಹ್ಮಣ್ಯ, ಕುಂಜಿಮೋಣು, ಪೋಲ್ಸನ್, ಶಿವರಾಮ್ ಶೆಟ್ಟಿ, ಅಜೀದ್, ಸಿದ್ದೀಕ್, ಗೋಪಾಲ ಆಚಾರ್, ವಿಕ್ರಂ ಗೌಡ, ಸತೀಶ್ ಗೌಡ, ಮೆಲ್ವಿನ್, ಉಮ್ಮಾರ್, ಹೊಸಕೆರೆ ರಮೇಶ್, ಸಬ್ಲಿ ದೇವರಾಜ್, ದೇವಪ್ಪ ಇತರರಿದ್ದರು.