

ಅಫಜಲಪುರ: ಮಹಾನ್ ಸಂತರು ಶರಣರನ್ನು ಜಾತಿ, ಧರ್ಮ ಮತ್ತು ಪ್ರಾಂತ್ಯಗಳ ಸಂಕೋಲೆಗಳಲ್ಲಿ ಬಂಧಿಸಬೇಡಿ. ಅವರು ಈ ಸಮಾಜ ಮತ್ತು ದೇಶವನ್ನು ತಿದ್ದಲು ಪ್ರಯತ್ನಿಸಿರುವ ಮಹಾನ್ ಚೇತನಗಳು. ಡಾ. ಅಂಬೇಡ್ಕರ್ ಕಂಡಿರುವುದು ಸಮೃದ್ಧ ಭಾರತದ ಕನಸಲ್ಲ, ಪ್ರಭುದ್ಧ ಭಾರತದ ಕನಸು ಎಂದು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ತಾಲೂಕಿನ ಭೈರಾಮಡಗಿ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಅವರ ನೂತನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿ, . ನಮ್ಮ ದೇಶದಲ್ಲಿ ಕೆಲವು ಸಂಘಟನೆಗಳಿಗೆ ಸಮಾನತೆ ಅಲಜರ್ಿಯಾಗುತ್ತಿದೆ. ಇದು ನಡೆಯುತ್ತಿರುವುದು ಆರು ವರ್ಷಗಳಿಂದ ನಡೆಯುತ್ತಿದೆ. ಯಾರು ಧರ್ಮದ ಹೆಸರಿನಲ್ಲಿ ಪ್ರಗತಿ ಕುಂಠಿತ ಮಾಡುತ್ತಾರೋ ಅವರು ನಿಜವಾದ ದೇಶದ್ರೋಹಿಗಳು ಎಂದು ಹೇಳಿದರು.
ಶಾಸಕ ಎಂ.ವೈ.ಪಾಟೀಲ್ ಮಾತನಾಡಿ, ಅಂಬೇಡ್ಕರ್ ಅವರ ಮೂತರ್ಿ ಅನಾವರಣ ಮಾಡಿದರೆ ಸಾಲದು. ಅವರ ತತ್ವಗಳಾದ ಶಿಕ್ಷಣ, ಸಂಘಟನೆ, ಹೋರಾಟಗಳು ನಮ್ಮ ಜೀವನದುದ್ದಕ್ಕೂ ಇರಬೇಕು ಎಂದು ಹೇಳಿದರು.
ಉರಿಲಿಂಗಪೆದ್ದಿ ಮಠದ ಡಾ.ಜ್ಞಾನಪ್ರಕಾಶ ಸ್ವಾಮಿ, ಮಾಜಿ ಎಂಎಲ್ಸಿ ಅಲ್ಲಮಪ್ರಭು ಪಾಟೀಲ್ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ನಿತೀನ ಗುತ್ತೇದಾರ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಎಂಎಲ್ಸಿ ತಿಪ್ಪಣಪ್ಪ ಕಮಕನೂರ. ಜಿಪಂ ಉಪಾಧ್ಯಕ್ಷೆ ಶೋಭಾ ಸಿರಸಗಿ, ಜಿಪಂ ಸದಸ್ಯ ದಿಲೀಪ ಪಾಟೀಲ್, ತಾಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ, ಪ್ರಮುಖರಾದ ರಾಜೇಂದ್ರ ಪಾಟೀಲ್ ರೇವೂರ, ಜೆ.ಎಂ.ಕೊರಬು, ಪ್ರಕಾಶ ಜಮಾದಾರ, ಸಿದ್ಧಾರ್ಥ ಬಸರಿಗಿಡ, ಸಿದ್ದು ಸಿರಸಗಿ, ಶಿವಕುಮಾರ ನಾಟೀಕಾರ, ನಾಗೇಶ ಕೊಳ್ಳಿ, ದಯಾನಂದ ದೊಡ್ಡಮನಿ, ಶರಣಗೌಡ ಪಾಟೀಲ್, ಮಹಾಲಿಂಗ ಅಂಗಡಿ, ಮಹಾಂತ ಬಳುಂಡಗಿ ಇತರರಿದ್ದರು.