ಪ್ರಬೋಧಿನಿ ವಿದ್ಯಾಕೇಂದ್ರದಲ್ಲಿ ಶೈಕ್ಷಣಿಕ ಸಹಮಿಲನ

prabodini
ಕಳಸ ಪ್ರಬೋಧಿನಿ ವಿದ್ಯಾಕೇಂದ್ರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಶೈಕ್ಷಣಿಕ ಸಹಮಿಲನ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ವಿದ್ಯಾಭಾರತಿ ಕಾರ್ಯದರ್ಶಿ ಶಂಕರನಾರಾಯಣ ಮಾತನಾಡಿದರು. ಮಹಿಪಾಲ್ ರೆಡ್ಡಿ, ಗಜೇಂದ್ರ ಗೊರಸುಕುಡಿಗೆ, ನಿತ್ಯಾನಂದ ವಿವೇಕವಂಶಿ ಇತರರಿದ್ದರು.
Published on

ಕಳಸ: ಚಿಕ್ಕಮಗಳೂರು ವಿದ್ಯಾಭಾರತಿ, ಪ್ರಬೋಧಿನಿ ಸೇವಾ ಪ್ರತಿಷ್ಠಾನ ಹಾಗೂ ಪ್ರಬೋಧಿನಿ ವಿದ್ಯಾಕೇಂದ್ರ ಸಹಯೋಗದಲ್ಲಿ ಜಿಲ್ಲಾ ಶೈಕ್ಷಣಿಕ ಸಹಮಿಲನ ಕಾರ್ಯಕ್ರಮ ಶನಿವಾರ ಕಳಸ ಪ್ರಬೋಧಿನಿ ವಿದ್ಯಾಕೇಂದ್ರದಲ್ಲಿ ನಡೆಯಿತು.

ಬೆಳಗ್ಗೆ ಉದ್ಘಾಟನಾ ಸಮಾರಂಭದಲ್ಲಿ ಚಿಕ್ಕಮಗಳೂರು ವಿದ್ಯಾಭಾರತಿ ಕಾರ್ಯದರ್ಶಿ ಶಂಕರನಾರಾಯಣ, ಅಧ್ಯಕ್ಷ ಗುರುಮೂರ್ತಿ ಕೊಪ್ಪ, ವಿದ್ಯಾಭಾರತಿ ಕರ್ನಾಟಕದ ಉಪಾಧ್ಯಕ್ಷ ಮಹಿಪಾಲ್ ರೆಡ್ಡಿ ಹಾಗೂ ಕಳಸ ಪ್ರಬೋಧಿನಿ ವಿದ್ಯಾಕೇಂದ್ರ ಕಾರ್ಯದರ್ಶಿ ರಾಘವೇಂದ್ರ ಭಟ್ ಇದ್ದರು.
ಉತ್ತಮ ಶಿಕ್ಷಕರಾಗಲು ಬೇಕಾಗುವ ಅರ್ಹತೆಗಳ ಬಗ್ಗೆ ಚಿಂತಕರಾದ ಸತ್ಯೇಂದ್ರ ಬೆಳ್ಳೂರು ಉಪನ್ಯಾಸ ನೀಡಿದರು. ಜಿಲ್ಲೆಯ 150ಕ್ಕೂ ಹೆಚ್ಚು ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿದ್ದರು. ಮಧ್ಯಾಹ್ನ ಗಜೇಂದ್ರ ಗೊರಸುಕುಡಿಗೆ ಅವರಿಂದ ಪರಿಸರ ಮತ್ತು ನಾವು, ವಿವೇಕ ವಿದ್ಯಾವಾಹಿನಿ ಟ್ರಸ್ಟ್ ಮೈಸೂರಿನ ಸಂಸ್ಥಾಪಕ ನಿತ್ಯಾನಂದ ವಿವೇಕವಂಶಿ ಅವರು ಭಾರತೀಯ ಜ್ಞಾನ ಪರಂಪರೆ ಕುರಿತು ಉಪನ್ಯಾಸ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net