

ಕಲಬುರಗಿ: ದೇಶದ ಇತಿಹಾಸದಲ್ಲಿಯೇ ಪ್ರಧಾನಿಯೊಬ್ಬರಿಗೆ ರಾಷ್ಟಿçÃಯ ಚುನಾವಣಾ ಆಯೋಗ ನೋಟಿಸ್ ನೀಡಿರುವುದು ನಾಚಿಕೆಗೇಡಿತನದ ಸಂಗತಿ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಆರೋಪಿಸಿದರು.
ಪ್ರಧಾನಿ ಮೋದಿ ಚುನಾವಣೆ ಭಾಷಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಾಂಗಲ್ಯ ಕಿತ್ತುಕೊಳ್ಳುತ್ತದೆ ಎಂಬ ಹೇಳಿಕೆ ಕುರಿತು ರಾಷ್ಟಿçÃಯ ಚುನಾವಣೆ ಆಯೋಗ ನೋಟಿಸ್ ನೀಡಿದ್ದು, ನಾಚಿಕೆಗೇಡಿತನ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೇಶದ ಚುನಾವಣಾ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಧಾನಮಂತ್ರಿ ಹೇಳಿಕೆಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಏ.೨೯ರೊಳಗೆ ವರದಿ ನೀಡಲು ತಾಕೀತ್ತು ಮಾಡಿದೆ. ೫೫ ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಜನಪರ ಆಡಳಿತ ನಡೆಸಿದೆ. ಎಂದಾದರೂ ಮಾಂಗಲ್ಯ ಕಿತ್ತು ಕೊಳ್ಳಲಾಗಿದೆಯೇ? ಆದರೆ, ಪ್ರಧಾನಿ ಮೋದಿ ಹೇಳಿಕೆ ಅತ್ಯಂತ ಕೀಳುಮಟ್ಟಕ್ಕೆ ಇಳಿದಿರುವುದು ಸಾಬೀತುಪಡಿಸುತ್ತಿದೆ ಎಂದು ಹೇಳಿದರು.
ಮಹಿಳೆಯರಿಗೆ ತಾಳಿ ಸ್ವಾಭಿಮಾನ ಸಂಕೇತ. ತಾಳಿಯೇ ಅವರ ಸರ್ವಸ್ವ. ತಾಳಿ ಕಿತ್ತುಕೊಳ್ಳಲಾಗುತ್ತದೆ ಜತೆಗೆ ಮುಸ್ಲಿಂ ಓಬಿಸಿ ಮೀಸಲಾತಿ ವಿವಾದ ಕೆದಕುತ್ತಿz್ದÁರೆ. ದೇಶದ ಪ್ರಧಾನಿಯಾಗಿ ಈ ರೀತಿಯ ಹೇಳಿಕೆ ನೀಡುವುದು ಶೋಭೆ ತರಲ್ಲ. ಚುನಾವಣೆ ಬಂದಾಗ ಮಾತ್ರ ಜಾತಿ, ಧರ್ಮದ ಮಾತುಗಳನ್ನು ಆಡುತ್ತಾರೆ. ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳಿAದ ಭಯಗೊಂಡು ಜಾತಿ ಧರ್ಮದ ಹೆಸರಲ್ಲಿ ಚುನಾವಣೆ ನಡೆಸಲು ಬಿಜೆಪಿ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಶಾಸಕ ಅಲ್ಲಮಪ್ರಭು ಪಾಟೀಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜಗೋಲಾರೆಡ್ಡಿ, ಮುಖಂಡರಾದ ನೀಲಕಂಠರಾವ ಮೂಲಗೆ, ಶರಣಬಸಪ್ಪ ಭೂಸನೂರ, ವಿಜಯಕುಮಾರ ಹಿರೇಮಠ ಇತರರಿದ್ದರು.