ಪ್ರಧಾನಿ ಸ್ಥಾನಕ್ಕೂ ಆಸೆ ಪಡಲಿಲ್ಲ

Congress
Published on

ಚಿತ್ರದುರ್ಗ: ಪ್ರಧಾನಿಯಾಗುವ ಅವಕಾಶ ಸಿಕ್ಕರೂ ಆಸೆ ಪಡದೆ, ಈ ಹಿಂದೆ ಮನಮೋಹನ್ ಸಿಂಗ್ ಅವರಿಗೆ ನೀಡಿ, ಪಕ್ಷಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ಮಾದರಿ ನಾಯಕಿ ಸೋನಿಯಾಗಾಂಧಿ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್ ಹೇಳಿದರು.

ಪಕ್ಷದ ಕಚೇರಿಯಲ್ಲಿ ಶನಿವಾರ ನಡೆದ ಸೋನಿಯಾಗಾಂಧಿ ಅವರ ಜನ್ಮದಿನಾಚರಣೆಯಲ್ಲಿ ಮಾತನಾಡಿ, ಇಂದಿರಾಗಾಂಧಿ, ರಾಜೀವ್‌ಗಾಂಧಿ ಹತ್ಯೆಯಾದಗಲೂ ದೃತಿಗೆಡದೆ ಪಕ್ಷವನ್ನು ಮುನ್ನಡೆಸಿದ್ದಾರೆ ಎಂದು ತಿಳಿಸಿದರು.

ಕೆಪಿಸಿಸಿ ಕುಶಲಕರ್ಮಿಗಳ ವಿಭಾಗದ ರಾಜ್ಯಾಧ್ಯಕ್ಷ ಆರ್.ಪ್ರಸನ್ನಕುಮಾರ್, ಮುಖಂಡರಾದ ಡಿ.ಎನ್.ಮೈಲಾರಪ್ಪ, ಎಚ್.ವಿ.ಕುಮಾರಸ್ವಾಮಿ, ಪಿ.ಕೆ.ಮೀನಾಕ್ಷಿ, ಬಿ.ಜಿ.ಶ್ರೀನಿವಾಸ್, ಕೆ.ಪಿ.ಸಂಪತ್‌ಕುಮಾರ್, ಶಬ್ಬೀರ್ ಬಾಷಾ, ಎನ್.ಡಿ.ಕುಮಾರ್, ಮುದಸಿರ್ ನವಾಜ್, ಬಿ.ರಾಜಣ್ಣ, ಚಾಂದ್‌ಪೀರ್, ಭಾಗ್ಯಮ್ಮ, ಜಯಣ್ಣ, ಇಂದಿರಾ, ಶಿವಲಿಂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net