ಪ್ರಧಾನಿ ಮೋದಿ ಸಂಕಲ್ಪ ಸಪ್ತಾಹದಲ್ಲಿ ಭಾಗಿ

02ydg01
Published on

ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವಾಕಾಂಕ್ಷಿ ತಾಲೂಕು ಅಡಿಯಲ್ಲಿ ನವ ದೆಹಲಿಯ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ಶನಿವಾರ ನಡೆಸಿದ ಸಂಕಲ್ಪ ಸಪ್ತಾಹ ಸಂವಾದದಲ್ಲಿ ವಡಿಗೇರಾ ತಾಲೂಕಿನ ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳು ಪಾಲ್ಗೊಂಡರು.

ದೇಶದ ಎಲ್ಲ ಬ್ಲಾಕ್ಗಳಿಂದ 500 ಜನ ಅಧಿಕಾರಿ, ಜನಪ್ರತಿನಿಧಿಗಳು ಸೇರಿಸಿದ್ದರು. ಹಳ್ಳಿಗಳ ಭಾರತವನ್ನು ಯಾವ ರೀತಿ ನಿಮರ್ಿಸಬೇಕು ಎಂದು ದೇಶದ ಪ್ರಧಾನಿಗಳು ಸಂವಾದದಲ್ಲಿ ನಮ್ಮಿಂದ ಅಭಿಪ್ರಾಯ ಸಂಗ್ರಹಿಸಿದ್ದು, ಆವಿಸ್ಮರಣೀಯ ದಿನವಾಗಿದೆ. ಕಾರ್ಯಕ್ರಮದಲ್ಲಿ ಮೋದಿ ಅವರು ಗ್ರಾಪಂಗಳ ಸದಸ್ಯರು ಮತ್ತು ಅಧಿಕಾರಿಗಳಿಗೆ ಅನೇಕ ಸಲಹೆಗಳನ್ನು ನೀಡಿದ್ದಾರೆ ಎಂದು ಗುಲಸರಂ ಗ್ರಾಪಂ ಉಪಾಧ್ಯಕ್ಷ ಗೌತಮ್ ಕ್ರಾಂತಿ ತಿಳಿಸಿದರು.

ಪ್ರಧಾನಮಂತ್ರಿಗಳ ಸಂವಾದ ಕಾರ್ಯಕ್ರಮದಲ್ಲಿ ವಡಿಗೇರಾ ತಾಲೂಕಿನ ಪಂಚಾಯಿತಿಗಳು ಆಯ್ಕೆಯಾಗಿದ್ದು ಹೆಮ್ಮೆ ತಂದಿದೆ. ಅತ್ಯಂತ ಸಂತಸದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಧಾನಿಗಳ ಸಲಹೆಗಳನ್ನು ಗೌರವದಿಂದ ಆಲಿಸಲಾಯಿತು. ಅವುಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ತಾಪಂ ಇಒ ಮಲ್ಲಿಕಾಜರ್ುನ ಸಂಗ್ವಾರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net