ಪ್ರಧಾನಿ ಮೋದಿ ಜನರ ದಾರಿ ತಪ್ಪಿಸುತ್ತಿದ್ದಾರೆ:ತಂಗಡಗಿ

Shivaraj Tangadagi.
Published on

ಕೊಪ್ಪಳ: ಬಿಜೆಪಿಗೆ ದೇಶದಲ್ಲಿ ನಡುಕ ಶುರುವಾಗಿದೆ. ಸೋಲಿನ ಭೀತಿ ಎದುರಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಭಾರತ, ಒಂದು ದೇಶ, ಒಂದು ಚುನಾವಣೆ ಎಂಬೆಲ್ಲ ವಿಷಯಗಳನ್ನು ಮುಂದಿಟ್ಟು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಶಿವರಾಜ ತಂಗಡಗಿ ಟೀಕಿಸಿದರು.


ಬಿಜೆಪಿ ಮುಳುಗುವ ಹಡಗು. ಹೀಗಿರುವಾಗ ಕಾಂಗ್ರೆಸ್ಸಿನವರು ಆ ಪಕ್ಷಕ್ಕೆ ಯಾಕೆ ಹೋಗುತ್ತಾರೆ ? 45 ಶಾಸಕರಲ್ಲ ಕೇವಲ ನಾಲ್ಕು ಶಾಸಕರನ್ನು ಬಿಜೆಪಿಗರು ಕರೆದುಕೊಂಡು ಹೋಗಲಿ. ಸುಮ್ಮನೆ ಪುಕಾರು ಹಬ್ಬಿಸುತ್ತಾರೆ. ಇಂಡಿಯಾ ಒಕ್ಕೂಟ ರಚನೆ ಬಳಿಕ ಅವರಿಗೆ ನಡುಕ ಶುರುವಾಗಿದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲುವುದು ಖಚಿತವಾಗಿದೆ. ಅದಕ್ಕೆ ಮನ ಬಂದಂತೆ ಮಾತನಾಡುತ್ತಿದ್ದಾರೆ. ಕಳೆದ 9 ವರ್ಷ ಮಾಡಲಾರದ್ದನ್ನು ಈಗ ಮಾಡ ಹೊರಟಿದ್ದಾರೆ. ನಮ್ಮ ದೇಶದಲ್ಲಿ ಏಕ ಕಾಲಕ್ಕೆ ಒಂದೇ ಚುನಾವಣೆ ನಡೆಸುವುದು ಅಸಾಧ್ಯ. ಇದೆಲ್ಲ ಜನರ ದಾರಿ ತಪ್ಪಿಸುವ ಗಿಮಿಕ್ ಎಂದು ಮಂಗಳವಾರ ಸುದ್ದಿಗಾರರನ್ನುದ್ದೇಶಿಸಿ ಕುಟುಕಿದರು.


ವಿದ್ಯುತ್ ಲೋಡ್ ಶೆಡ್ಡಿಂಗ್‌ನಿಂದ ಟಿಸಿ ಸುಟ್ಟು ಸಮಸ್ಯೆಯಾದ ಬಗ್ಗೆ ರಾಯರಡ್ಡಿಯವರು ನನಗೆ ತಿಳಿಸಿದ್ದರೆ, ನಾನೇ ಅಧಿಕಾರಿಗಳೊಂದಿಗೆ ಮಾತನಾಡಿ ಸರಿಪಡಿಸುತ್ತಿದ್ದೆ. ಸಿಎಂಗೆ ಪತ್ರ ಬರೆದು ಸಮಸ್ಯೆ ಹೇಳಿಕೊಂಡಿದ್ದಾರೆ. ಅದರಲ್ಲಿ ತಪ್ಪೇನಿದೆ ? ರಾಯರಡ್ಡಿ ಪವರ್‌ಫುಲ್ ನಾಯಕ. ನಮ್ಮ ಹಿರಿಯರು. ಅವರು ಏನೇ ಹೇಳಿದರೂ ಸುದ್ದಿಯಾಗುತ್ತದೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಪರೋಕ್ಷವಾಗಿ ಲೇವಡಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net