ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ

CTD 29 BJP--01
Published on

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ,ಶಿವಮೊಗ್ಗದ ಬಿಜೆಪಿ ಶಾಸಕ ಚನ್ನಬಸಪ್ಪ(ಚೆನ್ನಿ)ಅವರು ಭಾನುವಾರ ಪಕ್ಷದ ಜಿಲ್ಲಾ ಕಚೇರಿಗೆ ಭೇಟಿ ನೀಡಿ ಕಾರ‌್ಯಕರ್ತರೊಂದಿಗೆ ಪ್ರಥಮ ಬಾರಿಗೆ ಸಮಾಲೋಚನೆ ನಡೆಸಿದರು.
ದೇಶಾದ್ಯಂತ ಬಿಜೆಪಿ ಅಲೆ ಇದೆ. ಪಕ್ಷದ ಕಾರ್ಯಕರ್ತರು ತಕ್ಷಣದಿಂದಲೇ ಕೇಂದ್ರ ಸರ್ಕಾರದ ಎಲ್ಲ ಜನಪರ ಯೋಜನೆಗಳನ್ನೂ ಪ್ರತಿ ಮನೆ, ಮನೆಗೆ ತಿಳಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರ ಹಿಡಿಯ ಬೇಕಿದೆ. ಇದಕ್ಕಾಗಿ ಕಾರ‌್ಯಕರ್ತರು ಸೇನಾನಿಗಳಂತೆ ಚುನಾವಣೆಯಲ್ಲಿ ಕೆಲಸ ಮಾಡಬೇಕಿದೆ.
ಆ ಮೂಲಕ ನಾವೆಲ್ಲರೂ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡೋಣ. ಪಕ್ಷ ಜಿಲ್ಲೆಗೆ ತಮ್ಮನ್ನು ಉಸ್ತುವಾರಿಯನ್ನಾಗಿ ನೇ ಮಿಸಿದೆ. ತಮ್ಮೆಲ್ಲರ ಸಹಕಾರದಿಂದ ಪಕ್ಷದ ವಹಿಸಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಬಾಯಿಸುವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ಎ.ಮುರುಳಿ ಅವರು ಮಾತನಾಡಿ,ಪಕ್ಷದ ಸಂಘಟನೆ, ಕೇಂದ್ರದ ಯೋಜನೆಗಳ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿ ಸುವ ನಿಟ್ಟಿನಲ್ಲಿ ಕಾರ‌್ಯಕರ್ತರು ಕಾರ‌್ಯಪ್ರವೃತ್ತರಾಗಬೇಕೆಂದರು.
ನಗರ ಘಟಕದ ಅಧ್ಯಕ್ಷ ನವೀನ್‌ಚಾಲುಕ್ಯ, ಗ್ರಾಮಾಂತರ ಘಟಕದ ಅಧ್ಯಕ್ಷ ಕಲ್ಲೇಶಯ, ಮಾಜಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್,ಡಾ. ಸಿದ್ದಾರ್ಥಗುಂಡಾರ್ಫಿ, ಸಂಪತ್‌ಕುಮಾರ್,ನಾಗರಾಜ್‌ಬೇದ್ರೆ,ಶಿವಣ್ಣಚಾರ್,ಜೆ.ಎಸ್.ಶಂಭು, ಚಂದ್ರಿಕಾಲೋಕನಾಥ್,ಶಾಮಲಾಶಿವಪ್ರಕಾಶ್, ಶೈಲಜಾರೆಡ್ಡಿ,ಶಾಂತಮ್ಮ,ಕೃಷ್ಣ,ಅರುಣಾ,ಕವನಾ,ಲೀಲಾ,ಕಿರಣ್,ಯಶವಂತ್,ತಿಪ್ಪೇಸ್ವಾಮಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net