

ಚಿತ್ರದುರ್ಗ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರ 74ನೇ ಜನ್ಮದಿನವನ್ನು ಭಾನುವಾರ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸುವ ಮೂಲಕ ಬಿಜೆಪಿ ನಗರ ಯುವ ಮೋರ್ಚಾ ಕಾರ್ಯಕರ್ತರು ಆಚರಿಸಿದರು.
ಅ. 2ರ ಗಾಂಧಿ ಜಯಂತಿವರೆಗೆ ನಿತ್ಯ ಒಂದಿಲ್ಲೊಂದು ಸೇವಾ ಪಾಕ್ಷಿಕವಾಗಿ ಬಿಜೆಪಿಯಿಂದ ಆಚರಿಸಲು ತೀರ್ಮಾನಿಸಲಾಗಿದೆ.
ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ, ನಗರ ಯುವ ಮೋರ್ಚಾ ಅಧ್ಯಕ್ಷ ಕೆ.ರಾಮು, ಪದಾಧಿಕಾರಿಗಳಾದ ಚಂದ್ರಶೇಖರ್, ನವೀನ್ ಚಾಲುಕ್ಯ, ಜಿ.ಎಸ್.ಸಂಪತ್‌ಕುಮಾರ್, ನಾಗರಾಜ್ ಬೇದ್ರೆ, ಶಂಭು, ಬಸಮ್ಮ, ಎಸ್.ಅರುಣ, ವರುಣ್, ಮಂಜು, ಅಭಿ, ಸಚ್ಚಿನ್, ಅನಿರುದ್ಧ್, ಸಮೃದ್, ಅಗ್ನಿ, ಪ್ರದೀಪ್ ಇತರರಿದ್ದರು.