ಪ್ರಧಾನ ಮಂತ್ರಿ ಧನ್‌ಧಾನ್ಯ ಕೃಷಿ ಯೋಜನೆಗೆ ಚಿತ್ರದುರ್ಗ ಆಯ್ಕೆ

CTD MP GOVINDA KARAJOLA-----
Published on

ಚಿತ್ರದುರ್ಗ: ಕೇಂದ್ರದ 2025-26ರ ಬಜೆಟ್‌ನಲ್ಲಿ 2025-26ರಿಂದ 6 ವರ್ಷಗಳ ಅವಧಿಯ ಪ್ರಧಾನ ಮಂತ್ರಿ ಧನ್‌ಧಾನ್ಯ ಕೃಷಿ ಯೋಜನೆ(ಪಿಎಂಡಿಡಿಕೆ ವೈ)ಯಡಿ 100 ಮಹತ್ವಾಕಾಂಕ್ಷೆ ಕೃಷಿ ಜಿಲ್ಲೆಗಳನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಲಾಗಿತ್ತು. ಅದರಂತೆ ಕೇಂದ್ರ ಸಚಿವ ಸಂಪುಟ ಈ ಯೋ ಜನೆಯಡಿ ಚಿತ್ರದುರ್ಗ ಜಿಲ್ಲೆಯನ್ನೂ ಸೇರಿಸಿ 100 ಮಹತ್ವಾಕಾಂಕ್ಷೆಯ ಕೃಷಿ ಜಿಲ್ಲೆಗಳ ಪಟ್ಟಿ ಬಿಡುಗಡೆ ಮಾಡಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ತಿಳಿಸಿದ್ದಾರೆ.

ಈ ಯೋಜನೆ ಅಕ್ಟೋಬರ್‌ನಲ್ಲಿ ಅಧಿಕೃತವಾಗಿ ಆರಂಭವಾಗಲಿದೆ. ದೇಶಾದ್ಯಂತ 100 ಜಿಲ್ಲೆಗಳ 1.7 ಕೋಟಿ ರೈತರಿಗೆ ಇದು ಉಪಯೋಗ ವಾ ಗಲಿದೆ. ಪ್ರತಿ ವರ್ಷ 24 ಸಾವಿರ ಕೋಟಿ ರೂ.ಗಳಂತೆ 1.44 ಲಕ್ಷ ಕೋಟಿ ರೂ.ಅನುದಾನವನ್ನು ಇದಕ್ಕಾಗಿ ಒದಗಿಸಲಾಗುತ್ತದೆ. ಭಾರತೀಯ ಕೃಷಿಯನ್ನು ಹೆಚ್ಚು ಉತ್ಪಾದಕ,ಸುಸ್ಥಿರ ಮತ್ತು ಆರ್ಥಿಕವಾಗಿ ಲಾಭದಾಯಕವಾಗಿಸುವ ಉದ್ದೇಶದೊಂದಿಗೆ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ.

ಕಡಿಮೆ ಬೆಳೆ ಇಳುವರಿ,ನೀರಿನ ಕೊರತೆ ಮತ್ತು ಸಂಪನ್ಮೂಲ ಸೀಮಿತ ಪ್ರದೇಶದಂತಹ ಸವಾಲುಗಳನ್ನು ಎದುರಿಸುತ್ತಿರುವ 100 ಜಿಲ್ಲೆಗಳನ್ನು ಆ ಯ್ಕೆಯಾಗಿವೆ. ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಪ್ರಧಾನ ಮಂತ್ರಿ ಫಸಲ್‌ಭೀ ಮಾ ಯೋಜನೆ,ಪ್ರಧಾನ ಮಂತ್ರಿ ಕೃಷಿ ಸಿಂಚಾಯಿನಿ ಯೋಜನೆ,ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಸೇರಿದಂತೆ 11 ಸಚಿವಾಲಯಗಳಲ್ಲಿ ಅಸ್ತಿತ್ವ ದಲ್ಲಿರುವ 36 ಕೃಷಿ ಯೋಜನೆಗಳನ್ನು ಒಟ್ಟುಗೂಡಿಸಿ,ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಬಯಸಿದೆ ಎಂದು ಕಾರಜೋಳ ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net