ಪ್ರಥಮ ಪ್ರಯತ್ನದಲ್ಲೆ ಕೆಎಎಸ್ ಉತ್ತೀರ್ಣರಾದ ಶೀತಲ್

ಪ್ರಥಮ ಪ್ರಯತ್ನದಲ್ಲೆ ಕೆಎಎಸ್ ಉತ್ತೀರ್ಣರಾದ ಶೀತಲ್
Published on

 ಹಾಸನ: ನಗರದ ಶೀತಲ್ ಎಂಬುವರು 2017-18ನೇ ಸಾಲಿನ ಕೆಪಿಎಸ್‌ಸ್ಸಿ, ಕೆಎಎಸ್ ಪರೀಕ್ಷೆಯಲ್ಲಿ 24ನೇ ರ‌್ಯಾಂಕ್ ಪಡೆಯುವ ಮೂಲಕ ಮೊದಲ ಪ್ರಯತ್ನದಲ್ಲೇ 2022ನೇ ಸಾಲಿನಲ್ಲಿ ತಹಸೀಲ್ದಾರ್ ಆಗಿ ಆಯ್ಕೆಯಾಗಿದ್ದಾರೆ.

ಹಾಸನದಲ್ಲಿ ಕಾಲೇಜು ಶಿಕ್ಷಣ ಮುಗಿಸಿ, ಎಂಸಿಇ ಕಾಲೇಜಿನಿಂದ ವೃತ್ತಿಪರವಾಗಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪೂರೈಸಿ, ಎಲ್ ಅಂಡ್ ಟಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಲೆ ಪ್ರತಿನಿತ್ಯ 6-8ಗಂಟೆಗಳ ಕಾಲ ಪರೀಕ್ಷೆಗೆ ಸಿದ್ದರಾಗುತ್ತಿದ್ದರು. 2017-18ನೇ ಸಾಲಿನಲ್ಲಿ ಪರೀಕ್ಷೆ ತೆಗೆದುಕೊಂಡು ಮೊನ್ನೆ ಪ್ರಕಟಗೊಂಡ ಫಲಿತಾಂಶದಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆಹೊಂದುವ ಮೂಲಕ ಹಾಸನ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಕಾರ್ಲೆಯಲ್ಲಿ ಶಿಕ್ಷಕಿಯಾಗಿರುವ ಪಾರ್ವತಿ ದೇವಿ ಹಾಗೂ ಶಿವಪ್ರಕಾಶ್ ಅವರ ಪುತ್ರಿಯಾಗಿರುವ ಇವರು ಸುನಿಲ್ ಎಚ್.ಸಿ ಅವರನ್ನು ಮದುವೆಯಾಗಿದ್ದು, ಇವರಿಗೆ 6 ವರ್ಷದ ಸಮ್ಮಿತಾ ಎಂಬ ಪುತ್ರಿ ಇದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net