ಪ್ರಥಮ ಪಿಯುಸಿ ವಿಜ್ಞಾನ ಪ್ರವೇಶಕ್ಕೆ ಅರ್ಜಿ

CTD 10 JAGDAISH HEBBALLI-00011
Published on

ಚಿತ್ರದುರ್ಗ:ಸಮಾಜ ಕಲ್ಯಾಣ ಇಲಾಖೆ ಮುರಾರ್ಜಿ ದೇಸಾಯಿ ವಿಜ್ಞಾನ ಪದವಿ ಪೂರ್ವ ವಸತಿ ಕಾಲೇಜು ಪ್ರಥಮ ಪಿಯುಸಿ ವಿಜ್ಞಾನ ವಿಭಾಗ(ಪಿಸಿಎಂಬಿ/ಪಿಸಿಎಂಸಿ)ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಮೇ 13ರಿಂದ 23ರವರೆಗೆ ಅರ್ಜಿ ಸ್ವೀಕಾರ ನಡೆಯಲಿದೆ.
ಜಿಲ್ಲೆಯಲ್ಲಿ ಹೊಳಲ್ಕೆರೆ ತಾಲೂಕು ಚಿತ್ರಹಳ್ಳಿ ಮುರಾರ್ಜಿ ದೇಸಾಯಿ ವಿಜ್ಞಾನ ಪದವಿ ಪೂರ್ವ ವಸತಿ ಕಾಲೇಜು ಹಾಗೂ ಬೊಮ್ಮನಕಟ್ಟೆ ಉನ್ನತೀಕರಿಸಿದ ಮುರಾರ್ಜಿ ದೇಸಾಯಿ ವಿಜ್ಞಾನ ಪದವಿ ಪೂರ್ವ ಕಾಲೇಜುಗಳಿವೆ. ಹತ್ತಿರದ ವಸತಿ ಶಾಲೆಗಳು ಹಾಗೂ ಕಾಲೇಜುಗಳಲ್ಲಿ ಅ ರ್ಜಿ ವಿತರಣೆ ಹಾಗೂ ಸ್ವೀಕರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ವಸತಿ ಶಾಲೆ,ಕಾಲೇಜು ಹಾಗೂ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದೆಂದು ಇಲಾಖೆ ಜೆಡಿ ಜಗದೀಶ್ ಹೆಬ್ಬಳ್ಳಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net