

ಚಿತ್ರದುರ್ಗ:ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಹಾಗೂ ಜಿಲ್ಲಾ ಕಾರಾಗೃಹದ ಸಹಯೋಗದೊಂದಿಗೆ ಜಿಲ್ಲಾ ಕಾರಾಗೃಹದ ಸಿಬ್ಬಂದಿಗೆ ಪ್ರಥಮ ಚಿಕಿತ್ಸೆ ಕುರಿತ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾದೇಶಿಕ ಸಾರಿಗೆ ಭರತ್ ಎಂ ಕಾಳಿಸಿಂೆ ಅವರು, ರಸ್ತೆ ಸುರಕ್ಷತೆ ಮತ್ತು ಪ್ರಥಮ ಚಿಕಿತ್ಸೆಯ ಮಹತ್ವ ತಿಳಿಸಿದರು. ಕಾರಾಗೃಹದ ಅಧೀಕ್ಷಕಿ ಮಹಾದೇವಿ ಎಂ ಮರಕಟ್ಟಿ ಅಧ್ಯಕ್ಷತೆ ವಹಿಸಿದ್ದರು.
ವಿಪತ್ತು ನಿರ್ವಹಣೆ ಮತ್ತು ಪ್ರಥಮ ಚಿಕಿತ್ಸೆ ರಾಷ್ಟ್ರಮಟ್ಟದ ತರಬೇತುದಾರ ಡಾ.ವಿ.ಎಲ್.ಎಸ್.ಕುಮಾರ್ ಅವರು ತರಬೇತಿ ನಡೆಸಿ ಕೊಟ್ಟರು. ತುರ್ತುಸ್ಥಿತಿ ನಿರ್ವಹಣೆಗೆ ಆಸ್ಪತ್ರೆಗೆ ಕಳುಹಿಸುವ ಮೊದಲು ನಿರ್ವಹಿಸುವಲ್ಲಿ ಪ್ರಥಮ ಚಿಕಿತ್ಸಾ ಜ್ಞಾನ ಮತ್ತು ಕೌಶಲ್ಯದ ಮಹತ್ವ ಒತ್ತಿ ಹೇಳಿದರು. ರೆಡ್‌ಕ್ರಾಸ್‌ನ ಉಪಸಭಾಪತಿ ಅರುಣ್‌ಕುಮಾರ್,ಮಜಹರ್‌ಉಲ್ಲಾ ಮತ್ತಿತರರು ಇದ್ದರು.