

ಬೆಳಗಾವಿ: ನಗರದಲ್ಲಿನ ನಾಲ್ಕು ಪ್ರತ್ಯೇಕ ಗಾಂಜಾ ಮಾರಾಟ ಮತ್ತು ಸೇವನೆ ಪ್ರಕರಣದಲ್ಲಿ ಏಳು ಆರೋಪಿಗಳನ್ನು ಬಂಧಿಸಿ, 2 ಕೆಜಿ 74 ಗ್ರಾಂ ಗಾಂಜಾ ವಶಕ್ಕೆ ಪಡೆಯುವಲ್ಲಿ ನಗರ ಪೊಲೀಸರು ಶನಿವಾರ ಯಶಸ್ವಿಯಾಗಿದ್ದಾರೆ.
ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ಮುತಗಾ ಗ್ರಾಮದ ಹತ್ತಿರ ಆರೋಪಿತಗಳಾದ ವಿನೂತ್ ಪ್ರಕಾಶ ಕೊಣ್ಣೂರ, ಸೂರಜ ಸುರೇಶ ಹಿಂಡಲಗೇಕರ ಅವರನ್ನು, ಖಡೆ ಬಜಾರ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ದಾರ ಮೈದಾನ್ಬಳಿ ಹರ್ಷಾ ಸುನೀಲ ವರ್ಮಾ, ಪ್ರಜ್ವಲ ಗುಂಡು ನಾವಗೇಕರ, ಉತ್ಕರ್ಷ ಸುನೀಲ ವರ್ಮಾ ಅವರನ್ನು ಮತ್ತು ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ಬಾಜಿ ಮಾರ್ಕೆಟ್ ಹತ್ತಿರ ಹರ್ಷಲ ಸಂಜಯ ಗುರವ ಹಾಗೂ ಕೇಂದ್ರ ಬಸ್ ನಿಲ್ದಾಣ ಹತ್ತಿರ ಗಾಂಜಾ ಸೇವಿಸಿದ್ದ ದರ್ಶನ ದಿನೇಶ ಗಾವಡೆ ಅವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.