ಪ್ರತ್ಯೇಕ ಪ್ರಕರಣದಲ್ಲಿ 12.90 ಲೀಟರ್ ಮದ್ಯ ವಶ

12 HANUR 5
ಅಜ್ಜೀಪುರದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಬಂಧಿತ ಆರೋಪಿಯೊಂದಿಗೆ ಅಬಕಾರಿ ನಿರೀಕ್ಷಕ ಸುನೀಲ್, ಉಪನಿರೀಕ್ಷಕ ಶ್ರೀಧರ್, ಸಿಬ್ಬಂದಿ ಯಶೋದಾ, ಪ್ರದೀಪ್‌ಕುಮಾರ್ ಇದ್ದರು.
Published on

ಹನೂರು: 2 ಪ್ರತ್ಯೇಕ ಪ್ರಕರಣದಲ್ಲಿ ಬುಧವಾರ ಅಬಕಾರಿ ಇಲಾಖೆ ಪೊಲೀಸರು ದಾಳಿ ನಡೆಸಿ 12.90 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ಅಜ್ಜೀಪುರ ಗ್ರಾಮದ ಎಂ.ಬೈರಾಜು ಬೈಕ್‌ನಲ್ಲಿ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಆಧರಿಸಿ ತಾಲೂಕು ಅಬಕಾರಿ ನಿರೀಕ್ಷಕ ಡಿ.ಸುನೀಲ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಪರಿಶೀಲಿಸಿದಾಗ ಮದ್ಯ ಇರುವುದು ದೃಢಪಟ್ಟಿದೆ. ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿ 8.640 ಲೀಟರ್ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಅಂಬಿಕಾಪುರ ಗ್ರಾಮದ ರವಿ ಎಂಬಾತ ಕಾಂಚಳ್ಳಿ, ಕೆ.ಗುಂಡಾಪುರ ಮಾರ್ಗದಲ್ಲಿ ಬೈಕ್‌ನಲ್ಲಿ ಮದ್ಯವನ್ನು ಸಾಗಿಸುತ್ತಿದ್ದ ವೇಳೆ ಅಬಕಾರಿ ಉಪ ನಿರೀಕ್ಷಕ ಶ್ರೀಧರ್ ಸಿಕ್ಕಿ ಬಿದ್ದ. ಆತನಿಂದ 4.320 ಲೀಟರ್ ಮದ್ಯ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಬಕಾರಿ ಸಿಬ್ಬಂದಿ ಕೆ.ಪ್ರದೀಪ್‌ಕುಮಾರ್, ಎನ್. ಸುಜನ್‌ರಾಜ್, ಎಂ.ಎನ್.ಸುಂದ್ರಪ್ಪ, ಎನ್.ಜಯಪ್ರಕಾಶ್, ಯಶೋದಾ, ಮಂಜುಪ್ರಸಾದ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net