

ಪ್ರತ್ಯೇಕ ಪ್ರಕರಣ: ಗಾಂಜಾ ಸೇವಿಸಿದ್ದ ಇಬ್ಬರ ಬಂಧನ
ಬೆಳಗಾವಿ: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಗಾಂಜಾ ಸೇವಿಸಿದ್ದ ಪ್ರಕರಣದಲ್ಲಿ ಇಬ್ಬರನ್ನು ನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಳೆ ಬಾಜಿ ಮಾರ್ಕೆಟ್ ಹತ್ತಿರ ಗೋವಾ ಮೂಲದ ಅದಮರೋಹಿಲ ಮಹಮ್ಮದ್ ರಪೀಕ ಶೇಖ (೩೧)ಮತ್ತು ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯ ರೈಲು ನಿಲ್ದಾಣದ ಹತ್ತಿರ ಗೋಕಾಕ ತಾಲೂಕಿನ ಚಿಕ್ಕನಂದಿ ಗ್ರಾಮದ ನಿವಾಸಿ ಶಂಕರ ರಾಮಪ್ಪ ದಾಸರ(೫೨) ಎಂಬುವವರನ್ನು ಬಂಧಿಸಿದ್ದಾರೆ.