ಪ್ರತ್ಯೇಕ ಪ್ರಕರಣ: 9 ಜನರ ಬಂಧನ

crime
Published on

ಪ್ರತ್ಯೇಕ ಪ್ರಕರಣ: 9 ಜನರ ಬಂಧನ

ಬೆಳಗಾವಿ : ನಗರದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದಡಿ ಮಂಗಳವಾರ ಪ್ರತ್ಯೇಕ 4 ಪ್ರಕರಣದಲ್ಲಿ 9 ಜನರನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಅನಗೋಳ ಸಾಯಿ ಕಾಲೋನಿ ಬಳಿ ಗಾಂಜಾ ಮಾರಟದಲ್ಲಿ ತೊಡಗಿದ್ದ ಪ್ರೀತಮ ವಿಜಯ ಕೋಳಿಕರ(23) ಎಂಬಾತನನ್ನು ಬಂಧಿಸಿ ,1.147 ಕೆಜಿ ಗಾಂಜಾ ,ಮೊಬೈಲ್ ತಿಲಕವಾಡಿ ಪೊಲೀಸರು ವಶ ಪಡೆಸಿಕೊಂಡಿದ್ದಾರೆ.

ಮಾಳಮಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಬಸವ ನಗರದ ಸರ್ವಿಸದ ರಸ್ತೆ ಬಳಿ ಗಾಂಜಾ ಸೇವನೆ ಮಾಡುತ್ರಿದ್ದ ಪ್ರಕಾಶ ನಾಮದೇವ ಗಂಗಾರೆಡ್ಡಿ,ಪೈಸಲ್ ಶಮಸುದ್ದಿನ್ ಮಜಾವರ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ‌.

ಇನ್ನೊಂದು ಪ್ರಕರಣದಲ್ಲಿ ಫಾರೂಕಿಯ ಕಾಲೋನಿಯ ಬಳಿ ಜೂಜಾಟದಲ್ಲಿ ತೊಡಗಿದ್ದ ಮುಸ್ತಾಕ ಇಕ್ಬಾಲ ಸಂಬರಗಿ(45),ಇರ್ಫಾನ್ ಮಹಮ್ಮದಹುಸೇನ್ ಕಲಾದಗಿ( 36), ಅಮನ ಮೇಹಬೂಬಸಾಬ್ ತಂಬಾಕವಾಲೆ(25),ಇರ್ಫಾನ್ ಮೀರಾಸಾಬ ಸನದಿ(36),ನಿಯಾಜ ಅಬ್ದುಲ ಗೌಂಡಿ(31)ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾಗು ನಗರದ ಅಮನ ನಗರದಲ್ಲಿ ಮಟಕಾ ದಂಧೆ ನಡೆಸುತ್ತಿದ್ದ ಖಾಜಾ ನಜೀರ್ ಅಹ್ಮದ್ ಕಲಾದಗಿ( 52) ಮಾಳಮಾರುತಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net