ಪ್ರತ್ಯೇಕ ನಿಗಮ ಸ್ಥಾಪನೆಗೆ ಒತ್ತಾಯ

CTD STRIK -----
Published on

ಚಿತ್ರದುರ್ಗ: ಕಮ್ಮಾರ ಕುಶಲ ಕರ್ಮಿಗಳಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಕಮ್ಮಾರ ಕುಶಲ ಕರ್ಮಿಗಳ ಸಂಘ ಹಾಗೂ ಜಿಲ್ಲಾ ಕಮ್ಮಾರ ಸಂಘದ ಪದಾಧಿಕಾರಿಗಳು ಬುಧವಾರ ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ವಿಶ್ವ ಕರ್ಮ ಅಭಿವೃದ್ಧಿ ನಿಗಮದಲ್ಲಿ ಕಮ್ಮಾರ ಸಮುದಾಯ ಸೇರಿಸಿರುವುದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಮ್ಮಾರ ಜಾತಿಯವರು ವಿಶ್ವ ಕರ್ಮ ಜಾತಿ ಪ್ರಮಾಣ ಪತ್ರ ಪಡೆಯಲಾಗದು. ವಿವಿಧ ಜಾತಿಗಳಿಗೆ ಇರುವಂತೆ ಪ್ರತ್ಯೇಕವಾಗಿ ಕಮ್ಮಾರ ಸಮುದಾಯಕ್ಕೂ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು.

ಪ್ರತ್ಯೇಕ ನಿಗಮವಿಲ್ಲದೆ ಸಮುದಾಯ ಆರ್ಥಿಕ, ಶೈಕ್ಷಣಿಕ ಹಾಗೂ ಔಧ್ಯೋಗಿಕ ಪ್ರಗತಿಗೆ ಅಡ್ಡಿಯಾಗಿದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಕಮ್ಮಾರ ಕುಶಲ ಕರ್ಮಿಕಗಳ ಅಭಿವೃದ್ಧಿ ನಿಗಮ, ಕಬ್ಬಿಣ ಮತ್ತು ಉಕ್ಕು ಸಾಮಗ್ರಿಗಳ ಉತ್ಪಾದನೆ-ಮಾರಾಟ ಮಂಡಳಿ ಸ್ಥಾಪಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ರವಿಕುಮಾರ್, ಆನಂದ್, ಕೆ. ಶಾಂತಕುಮಾರ್, ಕೆ. ಮಹೇಶ್, ಕೆ.ಟಿ. ಲೋಕೇಶ್, ಎಚ್. ರಾಮಚಂದ್ರಪ್ಪ, ಟಿ. ಲೋಕೇಶ್, ಎಂ. ಸಂತೋಷ್, ಎನ್. ನಾಗೇಶ್, ಪಾಪಣ್ಣ, ಕೆ.ಪಿ. ಶಿವಣ್ಣ, ಅಂಜಿನಪ್ಪ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net