

ಕಲಬುರಗಿ: ವೀರಶೈವ ಲಿಂಗಾಯತ ಸಮಾಜ ಇಂದು ಕವಲು ದಾರಿಯಲ್ಲಿದೆ. ಪ್ರಸ್ತುತ ಪ್ರತ್ಯೇಕ ಧರ್ಮದ ಮಾನ್ಯತೆ ವಿಚಾರ ಮುನ್ನಲೆಯಿದ್ದು, ಆದರೆ ಎಲ್ಲ ಒಳಪಂಗಡಗಳನ್ನು ಸೇರಿಸಿ ಮುಂದೆ ಸಾಗಬೇಕಿದೆ. ಈ ಬಗ್ಗೆ ವಿಚಾರ ಮಾಡುವ ಸ್ಥಿತಿ ಇದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ, ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದ ಧರಿಯಾಪುರ ಕೋಟನೂರದ ಮಹಾದೇವಪ್ಪ ರಾಂಪುರೆ ಜಿಡಿಎ ಲೇಔಟ್‌ನ ಬಳಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ನಿರ್ಮಿಸಿರುವ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ವಸತಿ ನಿಲಯವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ಕೇಂದ್ರದ ಓಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತರ ಎಲ್ಲ ಒಳಪಂಗಡದವರು ಸೇರಲು ಸಂಘಟಿತರಾಗಿ ಹೋರಾಡಬೇಕು ಎಂದು ಹೇಳಿದರು.
ಸಮಾಜದಲ್ಲಿ ವೈಯಕ್ತಿಕವಾಗಿ ಸಬಲರಾಗಿದ್ದು, ಸಂಘಟಿತರಾಗಿ ದುರ್ಬಲರಾಗಿz್ದೆÃವೆ. ಎಲ್ಲ ಜಾತಿ, ಧರ್ಮಗಳವರ ಸುಖ, ದುಖಃದಲ್ಲಿ ವೀರಶೈವ ಸಮಾಜದವರು ಭಾಗಿಯಾಗಿದ್ದಾರೆ. ಆದರೆ ನಮ್ಮ ನಮ್ಮ ಮಧ್ಯೆ ಈಷ್ಯೇð, ಸ್ವಯಂ ಪ್ರತಿಷ್ಠೆಯಿಂದ ಹಿಂದುಳಿಯುತ್ತಿದ್ದು, ಅದನ್ನು ಬಿಟ್ಟು ಮುಂದೆ ಸಾಗಬೇಕು ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿ, ವಸತಿ ನಿಲಯಗಳು ಸಮಾಜದ ವಿದ್ಯಾರ್ಥಿನಿಯರ ಅಧ್ಯಯನಕ್ಕೆ ಅನುಕೂಲ ಕಲ್ಪಿಸಲಿವೆ. ವಿದ್ಯಾರ್ಥಿನಿಯರಿಗೆ ಅವಕಾಶ ನೀಡಿದರೆ ಸಾಧಕರಾಗಿ ಹೊರ ಹೊಮ್ಮುತ್ತಾರೆ. ಶರಣರ ಕಲ್ಪನೆಯಂತೆ ಸಮಾನತೆಯನ್ನು ಸಾಧಿಸಲು ವಸತಿ ನಿಲಯ ಸಾಧನವಾಗಿವೆ. ಇಲ್ಲಿ ನಿತ್ಯ ಉಚಿತ ದಾಸೋಹ ನಡೆಸಬೇಕು. ೫೦೦ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಸತಿ ನಿಲಯ ನಿರ್ಮಾಣ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಸಣ್ಣ ಕೈಗಾರಿಕೆ ಸಚಿವ, ಹಾಸ್ಟೆಲ್ ಉಸ್ತುವಾರಿ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಎಲ್ಲರ ಕಣ್ಣು ಲಿಂಗಾಯತ ಸಮಾಜದವರ ಮೇಲೆಯೇ ಇದೆ. ಸಮಾಜದಲ್ಲಿ ಇರುವ ಹಲವು ವಿದ್ಯಾರ್ಥಿನಿಯರು ವಸತಿ ದೊರೆಯದೇ ಇರುವುದಕ್ಕೆ ಶಿಕ್ಷಣ ಬಿಟ್ಟಿದ್ದಾರೆ. ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಇಂತಹ ಕಾರ್ಯಗಳು ಸಾಧ್ಯ. ಸಮಾಜದಲ್ಲಿನ ಬಡವರನ್ನು ಮೇಲೆ ತಂದಾಗ ಮಾತ್ರ ಸಮಾಜಕ್ಕೆ ಉತ್ತಮ ಹೆಸರು ಬರುತ್ತದೆ ಎಂದು ಹೇಳಿದರು.
ಚಿಣಮಗೇರಿಯ ಶ್ರೀ ವೀರ ಮಹಾಂತ ಶಿವಾಚಾರ್ಯರು ಆಶೀರ್ವಚನ ನೀಡಿದರು. ಮಹಾಸಭೆ ಜಿಲ್ಲಾಧ್ಯಕ್ಷ ಶರಣು ಮೋದಿ ಪ್ರಸ್ತಾವಿಕ ಮಾತನಾಡಿದರು. ಶಾಸಕರಾದ ಎಂ.ವೈ.ಪಾಟೀಲ್, ಅಲ್ಲಮಪ್ರಭು ಪಾಟೀಲ್, ಶಶೀಲ ನಮೋಶಿ, ಶರಣಗೌಡ ಕಂದಕೂರ, ಚಂದ್ರಶೇಖರ ಪಾಟೀಲ್, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ರಾಜಕುಮಾರ ಪಾಟೀಲ್ ತೇಲ್ಕೂರ, ಪ್ರಮುಖರಾದ ಸುರೇಶ ಸಜ್ಜನ್, ಬಸವರಾಜ ಭೀಮಳ್ಳಿ, ಕಲ್ಯಾಣಪ್ಪ ಪಾಟೀಲ್ ಮಳಖೇಡ, ನೀಲಕಂಠರಾವ ಮೂಲಗೆ, ಡಾ.ಶರಣಬಸವಪ್ಪ ಕಾಮರೆಡ್ಡಿ, ಶಾಂತಕುಮಾರ ಬಿಲಗುಂದಿ, ರಾಜೇಂದ್ರ ಪಾಟೀಲ್ ರೇವೂರ, ಜಯರಾಜ ಪಾಟೀಲ್ ಓಕಳಿ, ಬಸವರಾಜ ವಾಲಿ, ಚಂದ್ರಶೇಖರ ತಳ್ಳಳ್ಳಿ, ಜಾಹ್ನವಿ ಮೋದಿ, ಸಂತೋಷ ಪಾಟೀಲ್ ಸರಡಗಿ, ಶರಣಬಸವಪ್ಪ ಬೆಣ್ಣೂರ, ಶಿವಶರಣಪ್ಪ ಸಿರಿ, ಶಿವಾನಂದ ಪಾಟೀಲ್ ಮರ್ತೂರ, ಸೋಮಶೇಖರ ಹಿರೇಮಠ, ಎಂ.ಎಸ್.ಪಾಟೀಲ್ ನರಿಬೋಳ, ಉಲ್ಲಾಸ ಪಾಟೀಲ್, ಡಾ.ಸುಧಾ ಹಾಲಕಾಯಿ, ಗೌರಿ ಚಿಚಕೋಟೆ, ಶ್ರೀಶೈಲ ಘೂಳಿ, ಬಸವರಾಜ ಬಿರಾದಾರ ಸೊನ್ನ, ಶ್ರೀಧರ ನಾಗನಹಳ್ಳಿ, ದಯಾನಂದ ಪಾಟೀಲ್ ಇತರರಿದ್ದರು.