

ಪ್ರತ್ಯೇಕ ಅಪಘಾತ ಪ್ರಕರಣ: ಇಬ್ಬರ ಸಾವು
ಚಿಕ್ಕೋಡಿ: ಹುಕ್ಕೇರಿ ತಾಲೂಕಿನ ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತ ಪಟ್ಟಿರುವ ಘಟನೆ ಗುರುವಾರ ನಡೆದಿದೆ.
ಅಕ್ಕಿವಾಟ ಗ್ರಾಮದಿಂದ ನಿಡಸೋಸಿ ಕಡೆಗೆ ಹೋಗುತ್ತಿದ್ದ ಗೋಡ್ಸ್ ವಾಹನದ ಚಾಲಕ ದಿಢೀರ್ ಬ್ರೇಕ್ ಹಾಕಿದ ಪರಿಣಾಮ ಹಿಂದೆ ಕುಳಿತಿದ್ದ ವ್ಯಕ್ತಿ ವಾಹನದಿಂದ ಬಿದ್ದು,ಗಂಭಿರವಾಗಿ ಗಾಯಗೊಂಡು ಮೃತ ಪಟ್ಟಿದ್ದಾನೆ. ಕಮತನೂರ ಗ್ರಾಮದ ನಿವಾಸಿ ಮಹಾದೇವ ಕೃಷ್ಣಪ್ಪಾ ಕಂಬಾರ(೩೭) ಮೃತ ದುರ್ದೈವಿ.
ಇನ್ನೊಂದು ಅಪಘಾತ ಘಟನೆಯಲ್ಲಿ ನೇರ್ಲಿ-ಎಲ್ಲಿಮುನ್ನೋಳಿ ಬೈಪಾಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಚರಂಡಿಗೆ ಬಿದ್ದು ಗಂಭಿರ ಗಾಯಗೊಂಡು ಮೃತ ಪಟ್ಟಿದ್ದಾನೆ. ನೇರ್ಲಿ ಗ್ರಾಮದ ರವೀಂದ್ರ ಮಲಗೌಡ ಪಾಟೀಲ ಮೃತ ವ್ಯಕ್ತಿ. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.