

ಯಾದಗಿರಿ: ಹಳ್ಳಿಗಳಲ್ಲಿ ಜನಸಾಮಾನ್ಯರು ತಮ್ಮ ಬಿಡುವಿನ ಸಮಯದಲ್ಲಿ ಸ್ವಚ್ಛತಾ ಕಾರ್ಯಗಳಲ್ಲಿ ಭಾಗಿಯಾಗುವ ಮೂಲಕ ಮಾದರಿ ಗ್ರಾಮ ನಮರ್ಿಸಲು ಪಣ ತೊಡುವಂತೆ ಜಿಪಂ ಸಿಇಒ ಗರೀಮಾ ಪನ್ವಾರ ಸಲಹೆ ನೀಡಿದರು.
ಶುಕ್ರವಾರ ಶಹಾಪುರ ತಾಲೂಕಿನ ದಿಗ್ಗಿ ಗ್ರಾಮದ ಅಂಬೇಡ್ಕರ್ ಭವನದ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಪಂ ಮತ್ತು ತಾಪಂಗಳ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಚ್ಛತೆಯೇ ಸೇವೆ ಪಾಕ್ಷಿಕ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ಮನೆ ಮತ್ತು ಗ್ರಾಮಗಳ ಸ್ವಚ್ಛತೆಯಿಂದ ಪರಿಸರ ಮತ್ತು ಮನುಷ್ಯನಲ್ಲಿ ಸಕಾರಾತ್ಮಕ ಬದಲಾವಣೆಗಳು ಆಗುತ್ತವೆ ಎಂದರು.
ರಸ್ತೆ ಬದಿ, ಮನೆ ಅಕ್ಕಪಕ್ಕದಲ್ಲಿ ಕಸ ಬಿಸಾಡುವುದು ಆರೋಗ್ಯಕ್ಕೆ ಮತ್ತು ನಿಸರ್ಗಕ್ಕೆ ಕೆಡಕನ್ನು ಉಂಟುಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಿ ಹಸಿ,ಒಣ ಕಸಗಳನ್ನು ವಿಂಗಡಿಸಬೇಕು. ಗ್ರಾಪಂನಿಂದ ಬರುವ ಕಸ ಸಂಗ್ರಹಣ ವಾಹನದಲ್ಲಿ ಹಾಕಬೇಕು. ಸಕರ್ಾರ ಗ್ರಾಮೀಣ ಭಾಗದಲ್ಲಿ ನೈರ್ಮಲ್ಯ ಕಾಪಾಡಲು ಸಾಕಷ್ಟು ಶ್ರಮಿಸುತ್ತಿದೆ. ಹಳ್ಳಿ ಜನರ ಸದೃಢ ಆರೋಗ್ಯಕ್ಕೆ ಹೆಚ್ಚಿನ ಒತ್ತು ಕೊಡುತ್ತಿದೆ ಎಂದು ಹೇಳಿದರು.
ತಾಪಂ ಇಒ ಸೋಮಶೇಖರ್ ಬಿರಾದಾರ್ ಮಾತನಾಡಿ, ಮಹಾತ್ಮ ಗಾಂ ಅವರ ಗ್ರಾಮ ಸ್ವರಾಜ್ ಪರಿಕಲ್ಪನೆಯಂತೆ ಗ್ರಾಮದ ಸ್ವಚ್ಛತೆ ಮತ್ತು ಅಭಿವೃದ್ಧಿಯು ದೇಶದ ಏಳಿಗೆಗೆ ಕಾರಣವಾಗುತ್ತದೆ. ಪ್ರತಿ ಮನೆಯಲ್ಲಿ ಶೌಚಗೃಹ ನಿಮರ್ಿಸಿ, ಬಳಸಿದರೆ ಸ್ವಚ್ಛತೆಯ ಜತೆಗೆ ಘನತೆ, ಗೌರವ ಮತ್ತು ಆರೋಗ್ಯದಿಂದ ಜೀವಿಸಬಹುದು. ಸ್ವಚ್ಛ ನೀರು, ರಸ್ತೆ ಹಾಗೂ ಚರಂಡಿಗಳು ಗ್ರಾಮಗಳ ಕಲ್ಯಾಣಕ್ಕೆ ಮುನ್ನುಡಿ ಬರೆಯುತ್ತವೆ ಎಂದು ತಿಳಿಸಿದರು.