ಪ್ರತಿಯೊಬ್ಬರೂ ರಕ್ತದಾನ ಮಾಡಿ

Everyone donate blood
Everyone donate blood
Published on

ಕುಳಗೇರಿ ಕ್ರಾಸ್: ಎಲ್ಲ ದಾನಗಳಿಗಿಂತ ರಕ್ತದಾನ ಅತಿ ಶ್ರೇಷ್ಠ. ಹೀಗಾಗಿ ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಮತ್ತೊಂದು ಜೀವಕ್ಕೆ ಆಸರೆಯಾಗಬೇಕು ಎಂದು ಆಪ್ತ ಸಮಾಲೋಚಕ ನೀಲಕಂಠ ಮಡಿವಾಳರ ಹೇಳಿದರು.

ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ದೊರೆಸ್ವಾಮಿ ವಿವಿದೋದ್ಧೇಶ ಟ್ರಸ್ಟ್ ಆಶ್ರಯದಲ್ಲಿ ವಿಶ್ವರಕ್ತದಾನಿಗಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ದೀರ್ಘಕಾಲ ಬದುಕಲು ರಕ್ತದಾನ ಅತ್ಯುಪಯುಕ್ತವಾಗಿದೆ ಎಂದರು.

ಯುವ ಸಮುದಾಯ ದುಶ್ಚಟಕ್ಕೆ ಬಲಿಯಾಗಿ ರಕ್ತವಿಲ್ಲದೆ ಸಾವಿನ ದವಡೆಯಲ್ಲಿ ಸಿಲುಕುತ್ತಿದೆ. ರಕ್ತವೆಂದರೆ ಅದು ಜೀವ ದ್ರವ್ಯ. ಹೀಗಾಗಿ ಸತ್ವಯುತ ಆಹಾರವನ್ನು ಸೇವಿಸಿ ಆರೋಗ್ಯವಾಗಿರಬೇಕು ಎಂದು ಹೇಳಿದರು.

ಸಾಹಿತಿ ಎ.ಎಸ್.ಮಕಾನದಾರ ಮಾತನಾಡಿ, ಭಾರತೀಯರಾದ ನಾವು ಸಂವಿಧಾನದ ಆಶಯದಂತೆ ಸಹಬಾಳ್ವೆ ಮಾಡಬೇಕು ಎಂದರು.

ಕಾನೂನು ಸೇವೆಗಳ ಪ್ರಾಧಿಕಾರದ ನಿವರತ್ತ ಶಿರಸ್ತೇದಾರ ಬಸವರಾಜ ಕುಕನೂರ, ಎ.ಎಸ್. ಮಕಾನದಾರ, ನಿವೃತ್ತ ಶಿಕ್ಷಕರಾದ ಸಂಗಮೇಶ ಕೊಣ್ಣೂರ, ಎಚ್.ಕೆ. ಪಾಟೀಲ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು.

ಶಾಂತಲಿಂಗ ಶ್ರೀಗಳು, ಜಾನಪದ ವಿದ್ವಾಂಸ ಮಲ್ಲಯ್ಯಸ್ವಾಮಿ ತೋಟಗಂಟಿ, ಪ್ರಾಚಾರ್ಯ ಪ್ರೊ.ಗುರು ಕಲ್ಲೇದ, ನಿವೃತ್ತ ಶಿಕ್ಷಕ ಎಸ್.ಎ್.ಕೊಣ್ಣೂರ, ಬಿ.ಕೆ. ಹಿರೇಗೌಡ್ರ, ಮುದಬಸಪ್ಪ ನಾಶಿ, ಕರಬಸಪ್ಪ ಐನಾಪುರ, ಪ್ರೊ. ಆರ್.ಬಿ. ಚಿನಿವಾಲರ ಇದ್ದರು.

ಪ್ರೊ. ಆರ್.ಕೆ. ಐನಾಪುರ ನಿರೂಪಿಸಿದರು. ವ್ಯವಸ್ಥಾಪಕ ಮಹಾಂತೇಶ ಹಿರೇಮಠ ಸ್ವಾಗತಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net