ಪ್ರತಿಯೊಬ್ಬರೂ ಬೂಸ್ಟರ್​ ಡೋಸ್​ ಲಸಿಕೆ ಪಡೆಯಿರಿ

3-10
ಅಥಣಿ ತಾಲೂಕಿನ ಲಕ್ಷಿ$್ಮವಾಡಿ ಗ್ರಾಮದಲ್ಲಿ ಅನಂತಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೂಸ್ಟರ್​ ಡೋಸ್​ ಲಸಿಕೆ ನೀಡಲಾಯಿತು. ಸುನಿತಾ ಸಣ್ಣಕ್ಕಿ, ರಾಮಗೌಡ ಸರಬಡಗಿ, ಮಲ್ಲಮ್ಮ ಲಕ್ಕವಡ್ಡರ, ಕಮಲಾ ಇಗಳಿ ಇತರರಿದ್ದರು.
Published on

ಅಥಣಿ : ಗ್ರಾಮೀಣ ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸೌಲಭ್ಯ ಕಲ್ಪಿಸುವುದಕ್ಕಾಗಿ ಆರೋಗ್ಯ ಅಮೃತ ಅಭಿಯಾನ ರೂಪಿಸಲಾಗಿದೆ ಎಂದು ಅಮೃತ ಅಭಿಯಾನ ಅಧಿಕಾರಿ ಭಾರತಿ ಬಿಜಾಪುರೆ ಹೇಳಿದರು.

ಅಥಣಿ ತಾಲೂಕಿನ ಲಕ್ಷಿ$್ಮವಾಡಿ ಗ್ರಾಮದಲ್ಲಿ ಅನಂತಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಗ್ರಾಪಂ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಬೂಸ್ಟರ್​ ಡೋಸ್​ ಲಸಿಕೆ ನೀಡಿ ಅವರು ಮಾತನಾಡಿದರು. ಗ್ರಾಪಂ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲಿ ಅಭಿಯಾನ ಹಮ್ಮಿಕೊಂಡು, ಜನರ ಆರೋಗ್ಯ ತಪಾಸಣೆ ನಡೆಸುವ ಜತೆಗೆ ಕರೊನಾ ಬೂಸ್ಟರ್​ ಡೋಸ್​ ನೀಡುತ್ತಿದ್ದು, ಪ್ರತಿಯೊಬ್ಬರೂ ಸದುಪಯೋಗ ಪಡೆಯಬೇಕು ಎಂದರು. ಒಟ್ಟು 192 ಜನರಿಗೆ ಆರೋಗ್ಯ ತಪಾಸಣೆ ನಡೆಸುವ ಜತೆಗೆ ಬೂಸ್ಟರ್​ ಡೋಸ್​ ಲಸಿಕೆ ನೀಡಲಾಯಿತು. ಪಿಡಿಒ ಎಸ್​.ಕೆ.ಅಡಹಳ್ಳಿ, ಚನ್ನಪ್ಪ ನಂದಿವಾಲೆ, ಆರೋಗ್ಯ ಸಹಾಯಕಿ ಸುನಿತಾ ಸಣ್ಣಕ್ಕಿ, ಅರ್ಪಿತಾ ನಂದಗಾಂವ, ಮಲ್ಲಮ್ಮ ಲಕ್ಕವಡ್ಡರ, ಕಮಲಾ ಇಗಳಿ, ರಾಮಗೌಡ ಸರಬಡಗಿ, ಸುರೇಶ ಸತ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net