ಪ್ರತಿಯೊಬ್ಬರೂ ಧರ್ಮ ನಿಷ್ಠೆ ರೂಢಿಸಿಕೊಳ್ಳಿ

Let everyone practice religious devotion.
Published on

ತೇರದಾಳ:ಧರ್ಮ ಧರ್ಮಗಳ ನಡುವೆ ಭಿನ್ನತೆ ಉಂಟಾಗುತ್ತಿರುವ ಇಂದಿನ ದಿನಗಳಲ್ಲಿ ವಸುದೇವ ಕುಟುಂಬಕಂ ಎಂಬ ತತ್ವವನ್ನು ಪ್ರತಿಯೊಬ್ಬರೂ ಪಾಲಿಸಬೇಕಾಗಿದೆ ಎಂದು ಕೊಣ್ಣೂರ ಹೊರಗಿನಮಠದ ಡಾ.ವಿಶ್ವಪ್ರಭು ಸ್ವಾಮೀಜಿ ಹೇಳಿದರು.ಪಟ್ಟಣದ ವಿರಕ್ತಮಠದಲ್ಲಿ ಸೋಮವಾರ ಹಮ್ಮಿಕೊಂಡ ಲಿಂ.ಶಿವಲಿಂಗೇಶ್ವರ ಸ್ವಾಮಿಗಳ 23ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಎಲ್ಲರೂ ಧರ್ಮ ಪಾಲಿಸಬೇಕು ಎಂದರು.ಸ್ಥಳಿಯ ಹಿರೇಮಠದ ಗಂಗಾಧರ ದೇವರು, ಚಿಮ್ಮಡ ಪ್ರಭು ಸ್ವಾಮೀಜಿ ಆಶೀರ್ವಚನ ನೀಡಿದರು. ಪುಣ್ಯಸ್ಮರಣೋತ್ಸವ ಅಂಗವಾಗಿ ಶ್ರೀಮಠದಲ್ಲಿ ಬೆಳಗ್ಗೆ ರುದ್ರಾಭಿಷೇಕ, ಗ್ರಂಥ ಉತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಿದವು. ನಿಂಗಪ್ಪ ಮಾಲಗಾಂವಿ, ಮಲ್ಲಪ್ಪ ಜಮಖಂಡಿ, ಪ್ರವಿಣ ನಾಡಗೌಡ, ಶಾಸಕ ಸಿದ್ದು ಸವದಿ, ಎಂ.ಸಿ.ಕುಂಚಗನೂರ ಇದ್ದರು.

ತೇರದಾಳ ಪಟ್ಟಣದ ವಿರಕ್ತಮಠದಲ್ಲಿ ಲಿಂ.ಶಿವಲಿಂಗೇಶ್ವರರ 23ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ಕೊಣ್ಣೂರ ಹೊರಗಿನಮಠದ ಡಾ.ವಿಶ್ವಪ್ರಭು ಸ್ವಾಮೀಜಿ ಉದ್ಘಾಟಿಸಿದರು. ಚಿಮ್ಮಡದ ಪ್ರಭು ಸ್ವಾಮೀಜಿ, ಹಿರೇಮಠದ ಗಂಗಾಧರದೇವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net