

ಸುರಪುರ: ಗಡಿಯಲ್ಲಿ ಸೈನಿಕರು ತಮ್ಮ ಪ್ರಾಣವನ್ನು ಪಣವಾಗಿಟ್ಟು ನಮ್ಮ ದೇಶ ಕಾಯುತ್ತಿರುವುದರಿಂದಲೇ ನಾವೆಲ್ಲ ಸುರಕ್ಷಿತವಾಗಿz್ದೆÃವೆ. ಹೀಗಾಗಿ ಪ್ರತಿಯೊಬ್ಬರೂ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ಇಲ್ಲಿನ ಗರುಡಾದ್ರಿ ಕಲಾ ಮಂದಿರದಲ್ಲಿ ಸೇನೆ, ಅರೆಸೇನೆ ಮತ್ತು ಮಾಜಿ ಯೋಧರ ಸಂಘ ಶನಿವಾರ ಹಮ್ಮಿಕೊಂಡ ಕಾರ್ಗಿಲ್‌ವಿಜಯೋತ್ಸವ ಮತ್ತು ಆಪರೇಶನ್ ಸಿಂಧೂರ ಯಶಸ್ವಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸೈನಿಕರಿಗೆ ನಾವು ಯಾವುದೇ ನೆರವು ನೀಡಿದರೂ ಕಡಿಮೆ. ನಗರದಲ್ಲಿ ಆದಷ್ಟು ಬೇಗ ಸೂಕ್ತ ಸ್ಥಳದಲ್ಲಿ ಯೋಧರ ಸಮುದಾಯ ಭವನ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಮಾಜಿ ಯೋಧ ಭೀಮಣ್ಣ ನಾಯಕ ಲಕ್ಷ್ಮೀಪುರ ಮಾತನಾಡಿ, ಕಾರ್ಗಿಲ್ ಕದನ ಮತ್ತು ಆಪರೇಶನ್ ಸಿಂಧೂರ ಈ ಎರಡು ನಮ್ಮ ಹೆಮ್ಮೆ. ನಮ್ಮಲ್ಲಿ ದೇಶಾಭಿಮಾನ ಉಕ್ಕಿ ಹರಿಯುತ್ತಿದೆ. ನನ್ನ ಏಕೈಕ ಮಗನನ್ನು ಸೇನೆಗೆ ಸೇರಿಸಿz್ದÉÃನೆ ಎಂದು ತಿಳಿಸಿದರು.
ಮಾಜಿ ಯೋಧ ನಿಂಗಣ್ಣ ಒಂಟೂರ ಚಂದಲಾಪುರ, ತಾವು ಉಗ್ರರ ಜತೆಗೆ ಸೆಣಸಾಡಿದ ದೃಶ್ಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಉಪನ್ಯಾಸಕ ರಾಜಶೇಖರ ವಿಭೂತಿ ಕಾರ್ಗಿಲ್ ವಿಜಯೋತ್ಸವ ಮತ್ತು ಆಪರೇಶನ್ ಸಿಂಧೂರ ಯಶಸ್ವಿ ಬಗ್ಗೆ ವಿವರವಾಗಿ ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ವೇಣುಗೋಪಾಲ ದೇವಸ್ಥಾನ ಆವರಣದಿಂದ ಅಮರ ಜ್ಯೋತಿ ಜವಾನ ಯಾತ್ರೆ ಅರಮನೆ, ಗಾಂಧಿವೃತ್ತ ಮಾರ್ಗವಾಗಿ ಗರುಡಾದ್ರಿ ಕಲಾ ಮಂದಿರ ತಲುಪಿತು. ಅರಸು ಮನೆತನದ ರಾಜಾ ಲಕ್ಷಿö್ಮÃನಾರಾಯಣ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ, ಬಿಇಒ ಯಲ್ಲಪ್ಪ ಕಾಡ್ಲೂರು, ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ, ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಶಕೀಲ್ ಅಹ್ಮದ್ ಖುರೇಶಿ, ದೊಡ್ಡ ದೇಸಾಯಿ, ಭೀಮನಗೌಡ ಲಕ್ಷ್ಮೀ, ವೆಂಕಟೇಶ ಬೇಟೆಗಾರ, ರಮೇಶ ದೊರೆ, ಮಹಿಬೂಬ ಒಂಟಿ, ಸಚಿನಕುಮಾರ ನಾಯಕ್ ಇತರರಿದ್ದರು.