ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಬೇಕು

PH 04
Published on

ಶಹಾಬಾದ್: ಪ್ರಜಾಪ್ರಭುತ್ವದಲ್ಲಿ ಮತದಾನ ಪ್ರಮುಖ ಪಾತ್ರ ವಹಿಸುತ್ತದೆ. ಚುನಾವಣೆ ವೇಳೆ ರಜೆಯ ಮಜಾದಲ್ಲಿದ್ದರೆ ಪ್ರಜಾಪ್ರಭುತ್ವ ದುರ್ಬಲವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಪ್ಪದೆ ತಮ್ಮ ಹಕ್ಕು ಚಲಾಯಿಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿನಾಥ ರಾವೂರ ಹೇಳಿದರು.

ರಾವೂರಿನ ಶ್ರೀ ಸಚ್ಚಿದಾನಂದ ಪ್ರೌಢಶಾಲೆಯಲ್ಲಿ ಸ್ವೀಪ್ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೂಕ್ತ ವ್ಯಕ್ತಿಗೆ ಮತ ಚಲಾಯಿಸುವ ಮೂಲಕ ನಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು. ಯುವ ಜನತೆ ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು ಎಂದು ಕರೆ ನೀಡಿದರು.

ಮುಖ್ಯಗುರು ವಿದ್ಯಾಧರ ಖಂಡಾಳೆ, ಪ್ರಮುಖರಾದ ಈಶ್ವರಗೌಡ ಪಾಟೀಲ್, ಸುಗುಣಾ ಕೋಳ್ಕೂರ, ರಾಧಾ ರಾಠೋಡ್, ಭುವನೇಶ್ವರಿ ಎಂ., ಮಂಜುಳಾ ಪಾಟೀಲ್, ಭಾರತಿ ಪರೀಟ್, ಜ್ಯೋತಿ ತೆಗನೂರ, ಶಿವಕುಮಾರ ಸರಡಗಿ, ಶರಣು ಸಜ್ಜನ್, ಅನೀಲ್,ಬಾಬು ಇತರರಿದ್ದರು.

ಶಿಕ್ಷಕ ಸಿದ್ದಲಿಂಗ ಬಾಳಿ ಪ್ರಾಸ್ತಾವಿಕ ಮಾತನಾಡಿದರು. ಮತದಾನ ಜಾಗೃತಿ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರಾದ ಸಾನಿಯಾ, ರಾಧಿಕಾ, ರಸೂಲ್‌ಬೀ (ಕಾಲೇಜು ವಿಭಾಗ), ಕಿರಣ, ಹರ್ಮೈನ್, ರೇಹಾನ್ (ಪ್ರೌಢಶಾಲೆ ವಿಭಾಗ) ಅವರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net