ಪ್ರತಿಯೊಬ್ಬರೂ ಆರೋಗ್ಯದ ಕಡೆ ಗಮನಹರಿಸಿ : ಡಾ.ಮಾಲಿನಿ

18 CRP 05
ಚನ್ನರಾಯಪಟ್ಟಣ ತಾಲೂಕು ಗುಂಡಶೆಟ್ಟಿಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಮಮತೆಯ ಜ್ಞಾನವಿಕಾಸ ಕೇಂದ್ರವನ್ನು ತಾಲೂಕು ಯೋಜನಾಧಿಕಾರಿ ಸುನೀತಾ ನಾಯಕ್ ಮಂಗಳವಾರ ಉದ್ಘಾಟಿಸಿದರು. ಡಾ.ಮಾಲಿನಿ, ಅಮ್ಮಯಮ್ಮ, ನಾಗರಾಜ್, ಸವಿತಾ, ಪುಷ್ಪ, ಕೃಷ್ಣಮೂರ್ತಿ, ಕುಮಾರ್, ಹರೀಶ್ ಮತ್ತಿತರರಿದ್ದರು.
Published on

ಚನ್ನರಾಯಪಟ್ಟಣ: ವ್ಯಾಪಕ ಮಳೆಯಿಂದ ಶೀತಮಯ ವಾತಾವರಣವಿದ್ದು, ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದು ಚನ್ನರಾಯಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ.ಮಾಲಿನಿ ಸಲಹೆ ನೀಡಿದರು.

ತಾಲೂಕಿನ ಗುಂಡಶೆಟ್ಟಿಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಮಮತೆಯ ಜ್ಞಾನವಿಕಾಸ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಾತಾವರಣದಲ್ಲಿ ಏರುಪೇರು ಹಾಗೂ ನೀರಿನಲ್ಲಿ ವ್ಯತ್ಯಾಸವಾಗಿರುವ ಪರಿಣಾಮ ಎಚ್ಚರಿಕೆ ವಹಿಸದಿದಲ್ಲಿ ಆರೋಗ್ಯದ ಮೇಲೆ ದುಷ್ಪಪರಿಣಾಮ ಬೀರಲಿದೆ. ನೀರನ್ನು ಕಾಯಿಸಿ ಕುಡಿಯುವ ಕ್ರಮವನ್ನು ಅನುಸರಿಸಬೇಕು. ಅದರಲ್ಲಿಯೂ ವೃದ್ಧರು ಹಾಗೂ ಮಕ್ಕಳು ಕುಡಿಯಲು ಬಿಸಿನೀರು ಬಳಕೆ ಮಾಡುವುದು ಸೂಕ್ತ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಮ್ಮಯಮ್ಮ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೇವಲ ಸಾಲ ನೀಡಿ ಹಿಂಪಡೆಯುವ ಕೆಲಸ ಮಾಡುತ್ತಿಲ್ಲ. ಅದರ ಹೊರತಾಗಿ ಶಿಕ್ಷಣ, ಆರೋಗ್ಯ, ಹೈನುಗಾರಿಕೆ, ಗುಡಿ ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೂ ಹೆಚ್ಚು ಒತ್ತು ನೀಡುವ ಮೂಲಕ ಜನತೆಯ ಬದುಕಿಗೆ ಆಸರೆಯಾಗುವ ಆಲದ ಮರವಾಗಿದೆ ಎಂದರು.

ತಾಲೂಕು ಯೋಜನಾಧಿಕಾರಿ ಸುನೀತಾ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ನಾಗರಾಜ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ, ಸೇವಾ ಪ್ರತಿನಿಧಿ ಪುಷ್ಪ, ಶಾಲಾ ಶಿಕ್ಷಕ ಕೃಷ್ಣಮೂರ್ತಿ, ಪ್ರಮುಖರಾದ ಕುಮಾರ್, ಹರೀಶ್, ಪ್ರಗತಿಬಂಧು ಹಾಗೂ ಸ್ವಸಹಾಯ ಸಂಘಗಳ ಅಧ್ಯಕ್ಷರು ಮತ್ತು ಸದಸ್ಯೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net