ಪ್ರತಿಯೊಬ್ಬರೂ ಅಧ್ಯಯನಶೀಲರಾಗಬೇಕು

3
ತೆಲಸಂಗ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ದಾನಮ್ಮ ಖೊಬ್ರಿ ಅವರನ್ನು ಸತ್ಕರಿಸಲಾಯಿತು. ವೀರೇಶ್ವರ ದೇವರು, ಡಿ.ಎಂ.ಘೋರ್ಪಡೆ, ಎಸ್.ಜಿ.ದೊಡ್ಡಮನಿ, ಸುರೇಶ ಸಮನೊಗೊಂಡ, ಡಾ.ಆರ್.ಡಿ.ಪೂಜಾರಿ ಇತರರು ಇದ್ದರು.
Published on

ತೆಲಸಂಗ: ಶಿಕ್ಷಕರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದಾಗ ಮಾತ್ರ ವಿದ್ಯಾರ್ಥಿ ಜೀವನ ಪರಿಪೂರ್ಣಗೊಳ್ಳಲು ಸಾಧ್ಯ ಎಂದು ತೆಲಸಂಗ ಹಿರೇಮಠದ ವೀರೇಶ್ವರ ದೇವರು ಹೇಳಿದರು.

ಗ್ರಾಮದ ಬಿವಿವಿ ಸಂಘದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಸಾಧನೆ ವಿಷಯ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ನಿರಂತರ ಅಧ್ಯಯನ ಮತ್ತು ಪರಿಶ್ರಮದ ಮೂಲಕ ಸಾಧನೆಯ ಮೆಟ್ಟಿಲೇರಬೇಕು. ಪಠ್ಯದ ಜತೆಗೆ ಪಠ್ಯೇತರ
ಚಟುವಟಿಕೆಗಳನ್ನು ಮೈಗೂಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಅಧ್ಯಯನಶೀಲರಾಗಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಡಿ.ಎಂ.ಘೋರ್ಪಡೆ, ಶಿಕ್ಷಕ ಎಸ್.ಜಿ.ದೊಡ್ಡಮನಿ, ಉಪನ್ಯಾಸಕ ಸುರೇಶ ಸಮನೊಗೊಂಡ ಮಾತನಾಡಿದರು. ನೀಟ್ ಪರೀಕ್ಷೆಯಲ್ಲಿ 650 ಅಂಕ ಗಳಿಸಿ ಅತ್ಯುನ್ನತ ಸಾಧನೆ ಮಾಡಿದ ದಾನಮ್ಮ ಖೊಬ್ರಿ ಅವರನ್ನು ಸತ್ಕರಿಸಲಾಯಿತು. ಡಾ.ಆರ್.ಡಿ.ಪೂಜಾರಿ, ವಕೀಲ ಅಮೋಘ ಖೊಬ್ರಿ, ಮಲ್ಲಿಕಾರ್ಜುನ ಹತ್ತಿ, ಕೇಶವ ಉಂಡೋಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net