ಪ್ರತಿಯೊಬ್ಬರು ವಿಮೆ ಮಾಡಿಸಿಕೊಳ್ಳಿ

01 ydg 02
Published on

ಯಾದಗಿರಿ: ಪ್ರತಿಯೊಬ್ಬರು ತಪ್ಪದೇ ವಿಮೆ ಮಾಡಿಸಿಕೊಳ್ಳಬೆಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಓರ್ಡಿಯಾ ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಪಂ, ತಾಪಂ ಹಾಗೂ ಗ್ರಾಪಂಗಳ ಆಶ್ರಯದಲ್ಲಿ ತಾಲೂಕಿನ ರಾಮಸಮುದ್ರ ಹೊರವಲಯದಲ್ಲಿ ಮಂಗಳವಾರ ಹಮ್ಮಿಕೊಂಡ ನರೇಗಾ ಯೋಜನೆಯ ಕೂಲಿ ಕಾರ್ಮಿಕರಿಗೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಪಿಎಂಜೆಜೆವೈ, ಪಿಎಂಸ್‌ಬಿವೈ, ಎಪಿವೈ ಮತ್ತು ಪಿಎಂಜೆಡಿವೈ ಅಡಿಯಲ್ಲಿ ವಿಮೆ ಮಾಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇದು ಸರ್ಕಾರದ ಮಹತ್ವದ ಯೋಜನೆಯಾಗಿದ್ದು, ಅತಂತ್ಯ ಕಡಿಮೆ ಹಣದಿಂದ ವಿಮೆ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಇಂದು ನೀವು ಮಾಡಿಸುವ ವಿಮೆ ಮುಂದೆ ಬಹಳ ಅನುಕೂಲವಾಗಲಿದೆ. ಖಾಸಗಿ ಕಂಪನಿಗಳಲ್ಲಿ ವಿಮೆಗೆ ಹೆಚ್ಚಿಗೆ ಹಣವಿದ್ದರೆ, ಸರ್ಕಾರದ ವಿವಿಧ ಯೋಜನೆಗಳಲ್ಲಿ ಅತ್ಯಂತ ಕಡಿಮೆ ಹಣದಲ್ಲಿ ವಿಮೆ ಪಾಲಿಸಿ ಮಾಡಿಕೊಳ್ಳಬಹುದು. ವಾರ್ಷಿಕ ೨೦ ರೂ. ಇದೆ. ಕಾರಣ ಎಲ್ಲರೂ ತಪ್ಪದೆ ಮಾಡಿಸಿಕೊಳ್ಳಬೆಕು ಎಂದು ಕಿವಿಮಾತು ಹೇಳಿದರು.

ಇಂದು ಸೈಬರ್ ಅಪರಾಧ ಹೆಚ್ಚಾಗುತ್ತಿವೆ, ಇದರಿಂದ ಜನರು ಜಾಗೃತರಾಗಿರಬೇಕು. ಎಲ್ಲರ ಮೊಬೈಲï‌ಗಳಿಗೆ ಓಟಿಪಿ ಕೇಳಿ ಬ್ಯಾಂಕ್ ಹೆಸರಲ್ಲಿ ಮೇಸೆಜ್ ಬರುತ್ತಿವೆ. ಅಂತಹಗಳನ್ನು ಓಪನ್‌ಮಾಡಿ ಅದಕ್ಕೆ ಬೇಕಾದ ಮಾಹಿತಿ ನೀಡಿದರೆ ಬ್ಯಾಂಕ್‌ನ ಖಾತೆಯಲ್ಲಿ ಇರುವ ಎಲ್ಲ ಹಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಲೀಡ್ ಬ್ಯಾಂಕ್‌ನ ವ್ಯವಸ್ಥಾಪಕ ಭೀಮರಾವ ಪಂಚಾಳ ಮಾತನಾಡಿ, ಕೂಲಿ ಕಾರ್ಮಿಕರಾಗಿ ಬ್ಯಾಂಕ್‌ಗಳಲ್ಲಿ ಸಾಕಷ್ಟು ಸಾಲದ ಸೌಲಭ್ಯವಿದ್ದು, ಅದರ ಲಾಭ ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ರಾಮಸಮುದ್ರ ಗ್ರಾಪಂ ಅಧ್ಯಕ್ಷೆ ಆನಂದಮ್ಮ, ಮಲ್ಲಿಕಾರ್ಜುನ ಗೊಲ್ಲನೋರ್, ತಾಪಂ ಇಇಒ ಮಹಾದೇವ ಬಾಬಳಗಿ, ಜಿ¯್ಲÁ ಪಂಚಾಯತಿಯ ಯೋಜನೆ ಅಧಿಕಾರಿಗಳು ಮತ್ತು ಮುಖ್ಯ ಲೆಕ್ಕಾಧಿಕಾರಿಗಳು , ಗ್ರಾಮ ಪಂಚಾಯತಿ ಸದಸ್ಯರು, ಕೂಲಿಕಾರ್ಮಿಕರು ಇದ್ದರು.ಬ್ಯಾಂಕಿನ ಸಿಬ್ಬಂದಿ ಕೂಲಿ ಕಾರ್ಮಿಕರಿಂದ ವಿಮೆ ಕಾರ್ಡ್ ಮಾಡಿಸಿ ವಿತರಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net