ಪ್ರತಿಯೊಬ್ಬರು ಪತ್ರಿಕೆ ಓದಬೇಕು

23
Published on

ಮೈಸೂರು: ಪ್ರತಿಯೊಬ್ಬರೂ ಪತ್ರಿಕೆಯನ್ನು ಓದಬೇಕು. ಇದರೊಂದಿಗೆ ಪತ್ರಿಕಾರಂಗವನ್ನು ಉಳಿಸಬೇಕು ಎಂದು ಶಾಸಕ ಕೆ.ಹರೀಶ್‌ಗೌಡ ಹೇಳಿದರು.


ಒಂಟಿಕೊಪ್ಪಲಿನಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪತ್ರಿಕಾ ಓದುಗರ ಸಂಖ್ಯೆ ಕಡಿಮೆಯಾಗಿದ್ದು, ಪತ್ರಿಕೆಗಳನ್ನು ಉಳಿಸಬೇಕಿದೆ ಎಂದರು.


ವಿತರಕರ ಸಮಸ್ಯೆಗಳಿಗೆ ನೆರವಾಗಲು ಸದಾ ಸಿದ್ಧ. ಮಳೆ ಸಂದರ್ಭದಲ್ಲಿ ಪತ್ರಿಕೆ ವಿತರಣೆ ಮಾಡಲು ಸರಿಯಾದ ಸೂಕ್ತ ಜಾಗವನ್ನು ಗುರುತಿಸಬೇಕಾಗಿದೆ. ಅಂತಹ ಜಾಗದಲ್ಲಿ ಸ್ಥಳಾವಕಾಶ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.


ಕಿಡ್ನಿ ವೈಪಲ್ಯದಿಂದ ಬಳಲುತ್ತಿರುವ ಪತ್ರಿಕಾ ವಿತರಕ ಪುಟ್ಟಸ್ವಾಮಿ ಅವರಿಗೆ ಡಯಾಲಿಸಿಸ್‌ಗಾಗಿ 25 ಸಾವಿರ ರೂ. ನೀಡಿ ಸಹಾಯ ಮಾಡಿದರು. ಪತ್ರಿಕಾ ವಿತರಕರು, ಪತ್ರಿಕೆಯ ಮ್ಯಾನೇಜರ್‌ಗಳು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net