ಪ್ರತಿಯೊಬ್ಬರು ಕ್ರೀಡಾಸಕ್ತಿ ಬೆಳೆಸಿಕೊಳ್ಳಿ

Everyone should develop sportsmanship
ಹೂವಿನಹಿಪ್ಪರಗಿ ಸಮೀಪದ ಹುಣಶ್ಯಾಳ ಪಿಬಿ ಗ್ರಾಮದ ಸಂಗಣ್ಣ, ಪರಪ್ಪ ಆಲೂರ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಪ್ರೌಢಶಾಲೆಗಳ ತಾಲೂಕುಮಟ್ಟದ ಕ್ರೀಡಾಕೂಟದಲ್ಲಿ ಬಸವನಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಸಚಿನಗೌಡ ಪಾಟೀಲ ಕ್ರೀಡಾಜ್ಯೋತಿ ಸ್ವೀಕರಿಸಿದರು. ಆನಂದ ದೇವರು, ಚನಬಸಯ್ಯ ಹಿರೇಮಠ, ಶಿವಾನಂದ ಮಂಗಾನವರ, ಪ್ರಕಾಶ ಆಲೂರ, ಗುಂಡಣ್ಣ ಶಾಸ್ತ್ರಿಗಳು, ಚಂದ್ರಕಾಂತ ಅಳಗುಂಡಗಿ, ಸಂಗಪ್ಪ ಆಲೂರ ಇತರರಿದ್ದರು.
Published on

ಹೂವಿನಹಿಪ್ಪರಗಿ: ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಮಕ್ಕಳನ್ನು ಹೆಚ್ಚು ಕ್ರೀಡೆಗಳಲ್ಲಿ ತೊಡಗಿಸುವುದರಿಂದ ಉತ್ತಮ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗುತ್ತದೆ. ದೈಹಿಕ ಶಿಕ್ಷಕರು ಇನ್ನಷ್ಟು ಕ್ರೀಡಾಪಟುಗಳನ್ನು ಬೆಳಸುವ ನಿಟ್ಟಿನಲ್ಲಿ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಬಿಇಒ ವಸಂತ ರಾಠೋಡ ಹೇಳಿದರು.

ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದ ಸಂಗಣ್ಣ, ಪರಪ್ಪ ಆಲೂರ ಪ್ರೌಢ ಶಾಲಾ ಆವರಣದಲ್ಲಿ ಶುಕ್ರವಾರ ನಡೆದ ಪ್ರಸಕ್ತ ಸಾಲಿನ ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜತೆಗೆ ಕ್ರೀಡಾಸಕ್ತಿ ಬೆಳೆಸಿಕೊಳ್ಳುವುದರೊಂದಿಗೆ ಜೀವನದಲ್ಲಿ ಸ್ಪಷ್ಟ ಗುರಿ ಹೊಂದಿರಬೇಕು. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ಶಾರೀರಕ ಹಾಗೂ ಭೌತಿಕ ಬೆಳವಣಿಗೆಯಾಗುತ್ತದೆ. ಕ್ರೀಡಾಪಟುಗಳು ಸೋಲು ಗೆಲುವಿನ ಬಗ್ಗೆ ಗಮನ ಹರಿಸದೇ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಸ್ಪರ್ಧಾ ಮನೋಭಾವವನ್ನು ಬೆಳಸಿಕೊಳ್ಳಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಆನಂದ ದೇವರು ಮಾತನಾಡಿ, ಕ್ರೀಡೆಗಳಲ್ಲಿ ಮೈಮರೆತು ತಲ್ಲೀನರಾದಾಗ ಸಿಗುವ ಮಾನಸಿಕ ನೆಮ್ಮದಿ ಎಲ್ಲಿಯೂ ಸಿಗುವದಿಲ್ಲ. ಜೀವನದಲ್ಲಿ ಹಣಗಳಿಕೆ ಮಾಡಬಹುದು ಆದರೆ ಆರೋಗ್ಯ ಗಳಿಕೆ ಅಸಾಧ್ಯ. ವಿದ್ಯಾರ್ಥಿಗಳು ತಮ್ಮ ಶಾಲೆಗಳಲ್ಲಿ ಕ್ರೀಡಾ ತರಬೇತಿ ಪಡೆದುಕೊಂಡು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತಾಲೂಕಿನ ಕೀರ್ತಿ ಪತಾಕೆ ಹಾರಿಸಬೇಕು ಎಂದರು.

ಚನಬಸಯ್ಯ ಹಿರೇಮಠ, ಸಚಿನಗೌಡ ಪಾಟೀಲ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ಮಂಗಾನವರ, ಪ್ರಕಾಶ ಆಲೂರ, ಗುಂಡಣ್ಣ ಶಾಸ್ತ್ರಿಗಳು, ಚಂದ್ರಕಾಂತ ಅಳಗುಂಡಗಿ, ಸಂಗಪ್ಪ ಆಲೂರ, ಗ್ರಾಪಂ ಅಧ್ಯಕ್ಷ ಅಪ್ಪು ನಾಯಕ, ಶ್ರೀಶೈಲ ಕೋಳೂರ, ಅಣ್ಣಪ್ಪ ಆಲೂರ, ಎಸ್.ಎಸ್. ಅವಟಿ, ಜಿ.ಎಸ್. ಕೂಡಗಿ, ದೈಹಿಕಶಿಕ್ಷಕ ಎಸ್.ಆರ್. ಮಠ, ಪಿ.ಎಸ್. ಅಳ್ಳಿಚಂಡಿ, ಎಸ್.ಎಂ. ಮೇಟಿ, ಮಲ್ಲಪ್ಪ ಮೇಟಿ, ರಮೇಶ ನಾಯ್ಕೋಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net