

ಚನ್ನರಾಯಪಟ್ಟಣ: ಪ್ರತಿಯೊಬ್ಬರು ಹಕ್ಕುಗಳನ್ನು ಚಲಾಯಿಸುವ ಹಾಗೂ ಅನುಭವಿಸುವ ಸ್ವಾತಂತ್ರ್ಯವನ್ನು ಸಂವಿಧಾನದ ಮೂಲಕ ಒದಗಿಸಿಕೊಟ್ಟ ವಿಶ್ವದ ಶ್ರೇ?್ಠ ಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಎಂದು ಉಪನ್ಯಾಸಕ ಎಂ.ಜೆ.ರತ್ನಾಕರ್ ಬಣ್ಣಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಿರಿಯ ನಾಗರಿಕರ ವೇದಿಕೆ ವತಿಯಿಂದ ಶುಕ್ರವಾರ ಅಯೋಜಿಸಿದ್ದ 67 ನೇ ಪರಿನಿಬ್ಬಾಣ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಪಂಚದ ಕೋಟ್ಯಂತರ ಜನರ ಶಕ್ತಿಯಾಗಿದ್ದರು ಎಂದರು.
ದೇಶದ ಕಟ್ಟ ಕಡೆಯ ವ್ಯಕ್ತಿಗೆ ಸವಲತ್ತುಗಳನ್ನು ಸಂವಿಧಾನಬದ್ಧವಾಗಿ ಒದಗಿಸುವ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹಗಲಿರುಳು ಹೋರಾಟ ನಡೆಸಿ ಆದರಲ್ಲಿ ಯಶಸ್ಸು ಕಾಣುವುದರ ಮೂಲಕ ಪ್ರತಿಯೊಬ್ಬ ಭಾರತೀಯರ ಮನಸ್ಸಿನಲ್ಲಿ ಉಳಿದ ಮಹಾನ್ ನಾಯಕ ಎಂದು ತಿಳಿಸಿದರು.
ನಮ್ಮ ದೇಶ ಸದೃಢ ಹಾಗೂ ಸಮೃದ್ಧವಾಗಿ ಮುನ್ನಡೆಯುತ್ತಿರಲು ಅಂಬೇಡ್ಕರ್ ರಚಿಸಿ ವಿಶ್ವಕ್ಕೆ ಮಾದರಿಯಾದ ಸಂವಿಧಾನ ಕಾರಣವಾಗಿದೆ. ಕಾನೂನು ಮತ್ತು ಹಣಕಾಸು ಸಚಿವರಾಗಿ ಮಹಿಳೆಯರಿಗೆ ಮತ್ತು ಎಲ್ಲಾ ವರ್ಗದ ಶೋಷಿತರ ಜತೆಗೆ ಆರ್ಥಿಕ ದುರ್ಬಲರಿಗೆ ಸಮಾನವಾದ ಹಕ್ಕು, ಅವಕಾಶಗಳನ್ನು ಕಲ್ಪಿಸಿಕೊಟ್ಟಂತಹ ಕಾನೂನು ತಜ್ಞ ಎಂದು ವರ್ಣಿಸಿದರು.
ನೋವಿನಲ್ಲಿ ನೊಂದು ಬಳಲುತ್ತಿದ್ದ ಪರಿಶಿ?್ಟ ಜಾತಿ ಮತ್ತು ವರ್ಗದವರಿಗೆ ಸಂವಿಧಾನದಲ್ಲಿ ಮೀಸಲಾತಿಯನ್ನು ಅಳವಡಿಸಿ ಆ ಮೂಲಕ ಸಮುದಾಯದವರು ಎಲ್ಲಾ ಕ್ಷೇತ್ರಗಳಲ್ಲಿಯೂ ಅಧಿಕಾರ ಮತ್ತು ಸ್ಥಾನ-ಮಾನಗಳನ್ನು ಅನುಭವಿಸಲು ವಿಶೇ?ವಾಗಿ ಅವಕಾಶ ಕಲ್ಪಿಸಿ ಕೊಡುವುದರ ಮೂಲಕ ಸಮಾಜದಲ್ಲಿ ಎಲ್ಲರಂತೆ ಸರಿ ಸಮಾನವಾಗಿ ಬದುಕಲು ಅವಕಾಶ ಕಲ್ಪಿಸಿ ಕೊಟ್ಟಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಮತ್ತು ಆದರ್ಶಗಳು ಎಲ್ಲಾ ಹಂತದಲ್ಲಿಯೂ ಸರ್ವಕಾಲಕ್ಕೂ ಶಾಶ್ವತವಾಗಿ ಉಳಿಯುವಂತಾಗಬೇಕು. ಆ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಎಲ್ಲಾ ವರ್ಗದವರು ಜಾತ್ಯಾತೀತವಾಗಿ ಮತ್ತು ಪಕ್ಷಾತೀತವಾಗಿ ಮಾನವೀಯ ಮತ್ತು ಸಮಾನತೆಯ ದೃಷ್ಟಿಯಿಂದ ಸದಾ ನೆನೆದು ಅವರ ಹೋರಾಟವನ್ನು ಸ್ಮರಿಸುವಂತಹ ಕೆಲಸ ನಿರಂತರವಾಗಿ ಆಗಬೇಕೆಂದು ನುಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಈಶ್ವರನ್, ಪ್ರಮುಖರಾದ ದಾಸಪ್ಪ, ರಾಮಚಂದ್ರ, ಕಾಂತರಾಜಪುರ ನಾಗೇಶ್, ಶ್ರವಣಬೆಳಗೊಳ ಲಕ್ಷ್ಮಣ್, ಶಿವಶಂಕರ್, ಸೋಮಶೇಖರ್, ಜಲೇಂದ್ರ, ಕೆಂಪಯ್ಯ, ಶಂಕರ್, ಮಂಜು ಹಾಗೂ ಇತರರು ಇದ್ದರು.