

ಬಾಗಲಕೋಟೆ: ದೇಶಕ್ಕೆ ಅನೇಕ ಕಾನೂನ ಪಂಡಿತರನ್ನು ಕೋಟ್ಟ ಹೆಮ್ಮೆ ಬಿವಿವಿ ಸಂಘದ ಎಸ್.ಸಿ. ನಂದಿಮಠ ಕಾನೂನು ಮಹಾವಿದ್ಯಾಲಯಕ್ಕೆ ಇದೆ ಎಂದು ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಬಿವ್ಹಿ.ವ್ಹಿ.ಸಂಘದ ಕಾನೂನು ಸಲಹೆಗಾರರಾದ ವನಮಾಲಾ ಯಾದವ ಹೇಳಿದರು.
ಬಿ.ವ್ಹಿ.ವ್ಹಿ.ಸಂಘದ ಎಸ್.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಘಟಕದ ಸಹಯೋಗದೊಂದಿಗೆ ಗುರುವಾರ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಸಿವಿಲ್ ನ್ಯಾಯಾಧೀಶ (ಕಿ.ಶ್ರೇಣಿ) ಮತ್ತು ಸಹಾಯಕ ಸರಕಾರಿ ಅಭಿಯೋಜಕರಾಗಿ ಆಯ್ಕೆಯಾದ ಎಸ್.ಸಿ.ನಂದಿಮಠ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಾನೂನಿನ ವಿದ್ಯಾರ್ಥಿಗಳಗೆ ಎಲ್ಲ ಕ್ಷೇತ್ರಗಳ ಬಗ್ಗೆ ಜ್ಞಾನ, ನೀತಿ ನಿಯಮಗಳ ಜೊತೆಗೆ ಕಾನೂನಿನಲ್ಲಿ ಮೂಲ ಉದ್ದೇಶಗಳ ತಳಹದಿಯ ಅರಿವೂ ಬಹಳ ಮುಖ್ಯವಾಗುತ್ತದೆ, ಶಿಸ್ತು, ಮನೋದರ್ಯ, ಸೇವಾಮನೋಭಾವ, ಮಾನವಿಯ ಗುಣ, ಘಣತೆಯೊಂದಿಗೆ ಆಗು ಹೋಗುಗಳ ಬಗ್ಗೆ ಎಚ್ಚರಿಕೆಯನ್ನು ವಹಿಸಿ ಪರಿಹಾರಗಳನ್ನು ಕಂಡುಕೋಳ್ಳು ಚಾಕಚಕ್ಯತೆಯನ್ನು ಬೆಳೆಸಿಕೊಳ್ಳಬೇಕು, ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕು ಇದೆ ಎಂಬುದನ್ನು ಗಮದಲ್ಲಿಟ್ಟುಕೊಂಡು, ವಿದ್ಯಾರ್ಥಿಗಳು ಸಂಶೋಧನಾತ್ಮಕ ಅಧ್ಯಯನದಲ್ಲಿ ತೊಡಗಬೇಕು. ಬಿ.ವ್ಹಿ.ವ್ಹಿ.ಸಂಘದ ಎಸ್.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯದ ದೇಶಕ್ಕೆ ಅನೇಕ ಉತ್ತಮ ಕಾನೂನು ಪಂಡಿತರನ್ನು ಕೋಟ್ಟಿರುವುದು ಹಮ್ಮೆಯ ವಿಷಯವಾಗಿದೆ ಎಂದರು.
ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ, ಉತ್ತರ ಕರ್ನಾಟಕದ ಈ ಭಾಗದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಸಂಘದ ಎಸ್.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯ ತನ್ನದೇ ಆದ ಕೊಡುಗೆ ನೀಡುತ್ತ ಬಂದಿದ್ದು. ೧೯೮೬ರಲ್ಲಿ ಪ್ರಾರಂಭವಾದ ಮಹಾವಿದ್ಯಾಲಯ ಇಲ್ಲಿಯವರೆಗೆ ಸುಮಾರು ೨೯ ಜನ ನ್ಯಾಯಾಧೀಶರುಗಳನ್ನು, ೪೦ಕ್ಕಿಂತ ಹೆಚ್ಚು ಸರಕಾರಿ ಅಭಿಯೋಜಕರನ್ನು, ಅನೇಕ ಪ್ರತಿಷ್ಠಿತ ಬಹುರಾಷ್ಟಿçÃಯ ಕಂಪನಿಗಳ ಕಾನೂನು ಅಧಿಕಾರಿಗಳನ್ನು ಮತ್ತು ಸಾವಿರಾರು ಜನ ಉತ್ತಮ ನ್ಯಾಯವಾದಿಗಳನ್ನು ಕೊಡಮಾಡಿದೆ. ಇನ್ನೂ ಹೆಚ್ಚಿನ ನ್ಯಾಯಾಧೀಶರುಗಳನ್ನು ನ್ಯಾಯಾಂಗ ವ್ಯವಸ್ಥೆಗೆ ಕೊಡಮಾಡುವುದು ಮಹಾವಿದ್ಯಾಲಯದ ಆಶಯವಾಗಿದೆ, ಇಂದು ತನ್ನದೆಯಾದ ಸಾಧನೆಯ ಹೆಸರಿನೊಂದಿಗೆ ರಾಜ್ಯದಲ್ಲಿ ಗುರಿತಿಸಿಕೊಂಡಿರುವುದು ಹೆಮ್ಮೆ ವಿಷಯವಾಗಿದೆ ಎಂದ ಅವರು ಕಾನೂನು ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ, ವಕೀಲಕಿ ಒಂದು ವೃತ್ತಿಯಲ್ಲಾ ಇದು ನ್ಯಾಯ ಒದಗಿಸುವ ವ್ಯವಸ್ಥೆಯಾಗಿದೆ, ಕಾನೂನು ವಿದ್ಯಾರ್ಥಿಗಳು ಒಳ್ಳೆಯ ನ್ಯಾಯಾಧೀಶರು ಹಾಗೂ ನ್ಯಾಯವಾಧಿಗಳಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ಸನ್ಮಾನ : ಇದೆ ಸಂದರ್ಭದಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಎಸ್.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾದ ಕುಮಾರಿ ಭಾಗ್ಯಶ್ರೀ ಮಾದರ ಹಾಗೂ ಸಹಾಯಕ ಸರಕಾರಿ ಅಭಿಯೋಜಕರಾಗಿ ಆಯ್ಕೆಯಾದ ಕುಮಾರಿ ಸಂಧ್ಯಾ ಸಿದ್ದಾಪೂರ, ವಾಯ್.ಜೆ.ಸಣಬಸಣ್ಣವರ, ಜಗತ್ ಕಣವಿ ಹಾಗೂ ನಾಗರಾಜ ಪೂಜಾರ ಇವರಿಗೆ ಮಹಾವಿದ್ಯಾಲಯದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಕುಮಾರಿ ಭ್ಯಾಗ್ಯಶ್ರೀ ಮಾದರ
ಹಕ್ಕುಗಳ ಜೋತೆಗೆ ಕರ್ತವ್ಯಗಳ ಬಗ್ಗೆ ಅರಿವು ಅಗತ್ಯವಿದ್ದು, ನೋಂದವರ ಬೆನ್ನಿಗೆ ನಿಲ್ಲೊವ ಕೆಲಸವಾಗಲಿ, ನಮಗೆ ವಿದ್ಯಾಧಾನ ಮಾಡಿದ ಮಹಾವಿದ್ಯಾಲಯ ಹಾಗೂ ಸಂಘದ ಬಗ್ಗೆ ಹೆಮ್ಮೆ ಇರಲಿ ಅದಕ್ಕೆ ಸದಾಕಾಲ ಚಿರರುಣಿಯಾಗಿರೋಣ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಶ್ರೀ ಗುರುಬಸವ ಎಸ್.ಸೂಳಿಭಾವಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ.ಪಿ.ಚಂದ್ರಿಕಾ ಅವರು ಕಾರ್ಯಕ್ರಮದಲ್ಲಿ ಸ್ವಾಗತಿಸಿ ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕಿ ಭವಾನಿ ಪಾಟೀಲ ಕಾಲೇಜಿನ ಬಗ್ಗೆ ಸಂಕ್ಷಿಪ್ತ ಪರಿಚಯ ತಿಳಿಸಿದರು, ಕುಮಾರ ಸುನೀಲ ಗೋಡಿ ಪ್ರಾರ್ಥನೆ ಸಲ್ಲಿಸಿದರೆ, ಸಹ ಪ್ರಾಧ್ಯಾಪಕ ಶರಣಬಸವ ವಂದಿಸಿದರು.