

ಬೈಲಹೊಂಗಲ: ಪರಸ್ಪರ ಸಹಬಾಳ್ವೆಯ ಜೀವನ ಅತ್ಯಂತ ಅವಶ್ಯ. ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಇರಬೇಕು. ಎನ್ಎಸ್ಎಸ್ ಶಿಬಿರವು ಸಾಮಾಜಿಕ ಸೇವಾ ಕಾರ್ಯದ ಜತೆಗೆ ಕಾನೂನು ಅರಿವು ನೀಡುತ್ತದೆ ಎಂದು ಅಭಿನವ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಸಮೀಪದ ನಯಾನಗರ ಗ್ರಾಮದಲ್ಲಿ ಕೆಆರ್ಸಿಎಸ್ ಶಿಣ ಸಂಸ್ಥೆಯ ಎಚ್.ವಿ. ಕೌಜಲಗಿ ಕಾನೂನು ಮಹಾವಿದ್ಯಾಲಯದ ವತಿಯಿಂದ ಶನಿವಾರ ಆಯೋಜಿಸಿದ್ದ ಎನ್ಎಸ್ಎಸ್ ಶಿಬಿರದಲ್ಲಿ ಮಾತನಾಡಿದರು. ಶಿಣ ಸಂಸ್ಥೆಯ ಚೇರ್ಮನ್ ವಿಶ್ವನಾಥ ಪಾಟೀಲ ಮಾತನಾಡಿ, ಎನ್ಎಸ್ಎಸ್ ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಹಕಾರ ಗುಣಗಳನ್ನು ಕಲಿಸುತ್ತದೆ. ಭಾವಿ ವಕೀಲರು ಉತ್ತಮ ನಾಯಕರಾಗಿ ನ್ಯಾಯ ಎತ್ತಿ ಹಿಡಿಯುವ ವ್ಯಕ್ತಿಗಳಾಗಲಿ ಎಂದು ಆಶಿಸಿದರು.
ನಾಲ್ಕು ದಿನಗಳ ಕಾಲ ಸಂಪನ್ಮೂಲ ವ್ಯಕ್ತಿಗಳು ವಿಶೇಷ ಉಪನ್ಯಾಸ ನೀಡಿದರು. ಟಿಎಚ್ಒ ಸಂಜಯ ಸಿದ್ದಣ್ಣವರ್ ನೇತೃತ್ವದಲ್ಲಿ ಜನಸಂಖ್ಯಾ ದಿನ, ಆರೋಗ್ಯ ತಪಾಸಣಾ ಶಿಬಿರ, ವಾಸನ್ ಐ ಕೇರ್ ಆಸ್ಪತ್ರೆಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ನೆರವೇರಿತು. ಮನರಂಜನೆ ಕಾರ್ಯಕ್ರಮಗಳು ಜರುಗಿದವು. ಪ್ರಾಚಾರ್ಯ ಪಿ.ಎನ್. ಪಾಟೀಲ, ಶಿಬಿರದ ಸಂಯೋಜಕ ಎಂ.ಎಸ್. ಪಟ್ಟಣಶೆಟ್ಟಿ , ಉಪನ್ಯಾಸಕರಾದ ಡಿ.ಎಸ್. ನರಗುಂದ, ದಿವ್ಯಾ ಕಟ್ಟಿ, ಜೋಸ್ೆ ಅಮ್ರೋಜ್, ವಿದ್ಯಾರ್ಥಿ ಪ್ರತಿನಿಧಿ ವೀರೇಶ ಸಂಗನಗೌಡ್ರ, ತಾಪಂ ಮಾಜಿ ಸದಸ್ಯ ಮಂಜುನಾಥ ಜೋರಾಪುರ, ಗ್ರಾಪಂ ಅಧ್ಯ ದೀಪಕ ಶೆಟೋಜಿ, ಮಂಜುನಾಥ ಮರೆಕ್ಕನವರ, ರಮೇಶ ಸಂಗೊಳ್ಳಿ, ದೇಮಗೌಡ ಶೀಲವಂತರ, ಪ್ರಕಾಶ ಅಡಕಿ, ನಾರಾಯಣ ನಲವಡೆ, ಗಂಗಯ್ಯ ಪೂಜೇರ, ನಬೀಸಾಬ್ ನದ್ಾ ಇತರರಿದ್ದರು.
&&&&&&&&&&&