ಪ್ರತಿಯೊಬ್ಬರಿಗೂ ಆರೋಗ್ಯದ ಬಗ್ಗೆ ನಿಗಾವಹಿಸಿ

14rajesh5
Published on

ಚಾಮರಾಜನಗರ: ಪ್ರಸ್ತುತ ಸಂದರ್ಭದಲ್ಲಿ ಪ್ರತಿಯೊಬ್ಬರೂ ಆರೋಗ್ಯದ ಮೇಲೆ ನಿಗಾವಹಿಸಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಸಲಹೆ ನೀಡಿದರು.

ನಗರದ ವರನಟ ಡಾ.ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ರೋಟರಿ ಸಂಸ್ಥೆ, ಮೈಸೂರಿನ ನಾರಾಯಣ ಹೃದ್ರೋಗ ಚಿಕಿತ್ಸಾಲಯ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಬೃಹತ್ ಆರೋಗ್ಯ ಶಿಬಿರ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರಿಗೂ ಆರೋಗ್ಯ ಬಹಳ ಮುಖ್ಯವಾಗಿದ್ದು, ಆರೋಗ್ಯ ಇಲ್ಲದ್ದಿದ್ದರೆ ಏನು ಇದ್ದರೂ ಎಲ್ಲ ಶೂನ್ಯವಾಗುತ್ತದೆ. ಆಗಾಗಿ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ನಿಗಾವಹಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ರೋಟರಿ ಸಂಸ್ಥೆಯು ಪೊಲೀಸರಿಗೆ ಆರೋಗ್ಯ ಶಿಬಿರ ಆಯೋಜಿಸಿರುವುದು ತುಂಬಾ ಸಹಕಾರಿಯಾಗಿದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮೈಸೂರು ನಾರಾಯಣ ಹೃದ್ರೋಗ ಆಸ್ಪತ್ರೆಯ ಹೃದಯ ತಜ್ಞ ಡಾ.ವಿ.ಕೇಶವಮೂರ್ತಿ ಮಾತನಾಡಿ, ಇತ್ತೀಚೆಗೆ 30 ರಿಂದ 35 ವರ್ಷದೊಳಗಿನವರಲ್ಲಿ ಹೆಚ್ಚಾಗಿ ಹೃದಯ ರೋಗ ಕಾಣಿಸಿಕೊಳ್ಳುತ್ತಿದ್ದು, ದೇಶದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿ ವರ್ಷವೂ ಪ್ರಚಂಚದಾದ್ಯಂತ 2 ಕೋಟಿ ಜನರು ಹೃದಯ ರೋಗದಿಂದ ಮೃತಪಡುತಿದ್ದಾರೆ. ಇದರ ಬಗ್ಗೆ ಯುವಜನತೆ ಜಾಗೃತರಾಗಬೇಕು ಎಂದರು. ಆರೋಗ್ಯ ಶಿಬಿರದಲ್ಲಿ 280 ಜನರು ಭಾಗವಹಿಸಿ ರಕ್ತದೊತ್ತಡ, ಶುಗರ್, ಇಸಿಜಿ, ಎಕೋ ಪರೀಕ್ಷೆ ಮಾಡಿಸಿಕೊಂಡರು.

ಕಾರ್ಯಕ್ರಮದಲ್ಲಿ ಡಾ.ಅಶೋಕ್, ಸಿ.ಆರ್.ಹನುಮಂತು, ಸಹಾಯಕ ಗವರ್ನರ್ ಡಾ.ರಾಘವೇಂದ್ರ ಪ್ರಸಾದ್, ಎಸ್.ಎಚ್.ಜಗದೀಶ್, ರೋಟರಿ ಸಂಸ್ಥೆಯ ಅಧ್ಯಕ್ಷ ಕಾಗಲವಾಡಿ ಚಂದ್ರು, ಕಾರ್ಯದರ್ಶಿ ಸಿದ್ದರಾಜು, ಸಂಸ್ಥಾಪಕ ಸದಸ್ಯ ಶ್ರೀನಿವಾಸ್ ಶೆಟ್ಟಿ, ಕಮಲ್ ರಾಜ್, ಮುಂದಿನ ಸಾಲಿನ ಅಧ್ಯಕ್ಷ ಅಬ್ದುಲ್ ಅಜೀಜ್ ದೀನ, ನೇಮಿರಾಜು, ಮಹದೇವಸ್ವಾಮಿ, ಭವಾನಿ ದೇವಿ, ಶ್ರೀನಿವಾಸನ್, ಮೈಸೂರು ಅಧ್ಯಕ್ಷ ರಾಜು, ಕಾರ್ಯದರ್ಶಿ ಬಾಲಸುಬ್ರಹ್ಮಣ್ಯಂ, ರೋಟರಿ ಕ್ಲಬ್ ಆಫ್ ಮೈಸೂರು ಎಲೈಟ್ ಅಧ್ಯಕ್ಷ ಎಸ್.ಎಸ್.ಮಹಾದೇವಸ್ವಾಮಿ, ಕಾರ್ಯದರ್ಶಿ ಕೆ.ಜಿ.ಹರೀಶ್, ರೋಟರಿ ಅಧ್ಯಕ್ಷ ರಾಕೇಶ್, ಮಹಾದೇವಸ್ವಾಮಿ, ರುದ್ರೇಶ್, ಬಸವರಾಜು, ರಾಜಣ್ಣ, ಮುರಳೀಧರ್, ಧರ್ಮೇಶ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net