

ಚಿಕ್ಕಮಗಳೂರು: ಪ್ರತಿಯೊಬ್ಬರ ಜೀವನದಲ್ಲಿ ಆರೋಗ್ಯ ಹಾಗೂ ನೆಮ್ಮದಿ ಅತಿ ಮುಖ್ಯ. ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ನೆಮ್ಮದಿ ಬೇಕಾಗಲು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯು ಮುಖ್ಯವಾಗಿದೆ. ಮಕ್ಕಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ಹೆಚ್ಚಾಗಿ ಭಾಗವಹಿಸಿ ಆರೋಗ್ಯ ಮತ್ತು ನೆಮ್ಮದಿಯನ್ನು ಪಡೆದುಕೊಳ್ಳಬೇಕು ಎಂದು ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಉಪಸಂಘಟನಾ ಆಯುಕ್ತೆ ಪ್ರಿಯಾಂಕ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಮಾಡೆಲ್ ಶಾಲೆಯಲ್ಲಿ ಕಿಪ್ಲಿಂಗ್ ಸ್ಕೌಟ್ ಮತ್ತು ಗೈಡ್ ತಂಡದಿAದ ಆಯೋಜಿಸಲಾಗಿದ್ದ ವಿಶ್ವ ಸ್ಕಾರ್ಫ್ ದಿನಾಚರಣೆಯನ್ನುz್ದೆÃಶಿಸಿ ಮಾತನಾಡಿದ ಅವರು, ೧೯೦೭ರಲ್ಲಿ ಬ್ರೌನ್‌ಸಿ ಐಲ್ಯಾಂಡ್‌ನಲ್ಲಿ ನಡೆದ ಮೊದಲ ಸ್ಕೌಟ್ಸ್ ಶಿಬಿರದ ಸವಿ ನೆನಪಿಗಾಗಿ ಪ್ರತಿವರ್ಷ ಆಗಸ್ಟ್ ೧ರಂದು ವಿಶ್ವಸ್ಕಾರ್ಫ್ ದಿನ ಆಚರಿಸಲಾಗುತ್ತದೆ. ಅಲ್ಲದೆ ಹೊಸದಾಗಿ ವಿದ್ಯಾರ್ಥಿಗಳನ್ನು, ಸ್ನೇಹಿತರನ್ನು ಮತ್ತು ಇತರೆ ಸದಸ್ಯರನ್ನು ಸ್ಕೌಟಿಂಗ್‌ಗೆ ಪರಿಚಯಿಸಲು ಕೂಡ ಈ ದಿನ ಅವಕಾಶ ಮಾಡಿಕೊಟ್ಟಿದೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ವತಿಯಿಂದ ಮಕ್ಕಳಿಗಾಗಿ ಆನ್‌ಲೈನ್‌ನಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ವಿದ್ಯಾರ್ಥಿಗಳು ಉತ್ಸುಕರಾಗಿ ಪಾಲ್ಗೊಂಡು ಸ್ಕೌಟಿಂಗ್‌ನ ಪ್ರಯೋಜನ ಮತ್ತು ಮೌಲ್ಯವನ್ನು ಎತ್ತಿ ಹಿಡಿಯಬೇಕು ಎಂದು ತಿಳಿಸಿದರು.
ಸ್ಕಾರ್ಫ್ ದಿನವು ಪ್ಲಾಸ್ಟಿಕ್ ನಿರ್ಮೂಲನೆ ಮತ್ತು ಶಾಲಾ ಆವರಣವನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿಸುವ ದಿನವೂ ಕೂಡ ಆಗಿದೆ. ಅದಕ್ಕಾಗಿ ಮಕ್ಕಳು ಶಾಲೆಯ ಆವರಣವನ್ನು ಯಾವಗಲೂ ಶುಚಿಯಾಗಿಡಬೇಕೆಂಬ ಫಲಕವನ್ನು ಹಾಕುವುದು ಮತ್ತು ಸ್ವಚ್ಛತೆ ಮಾಡಬೇಕು ಎಂದರು.
ಆ.೧ನ್ನು ಸ್ಕೌಟಿಂಗ್ ಸೂರ್ಯೋದಯದ ದಿನ ಎಂದೂ ಸಹ ಕರೆಯುತ್ತಾರೆ. ಹೇಗೆ ಸೂರ್ಯನ ಕಿರಣಗಳು ವಿಶ್ವದಾದ್ಯಂತ ಪಸರಿಸಿದೆಯೋ ಹಾಗೆಯೇ ಸ್ಕೌಟಿಂಗ್ ಸಹ ವಿಶ್ವದಾದ್ಯಂತ ಪಸರಿಸಿದೆ. ವಿಶ್ವ ಸ್ಕಾರ್ಪ್ ದಿನದ ಅಂಗವಾಗಿ ಮಕ್ಕಳಿಗೆ ತಮ್ಮ-ತಮ್ಮ ಸ್ಕಾರ್ಪ್ನ್ನು ಪರಸ್ಪರ ವಿನಿಮಯ ಮಾಡಿಸುವ ಒಂದು ಚಟುವಟಿಕೆ ಮತ್ತು ವಿಶಿಷ್ಠವಾದ ಚಪ್ಪಾಳೆಯನ್ನು ಹೇಳಿಕೊಡುವುದರ ಮೂಲಕ ಮಕ್ಕಳನ್ನು ರಂಜಿಸಿದರು.
ಜಿಲ್ಲಾ ಸ್ಕೌಟ್ ಸಂಘಟನಾ ಆಯುಕ್ತ ಕಿರಣ್ ಮಾತನಾಡಿ, ಸ್ಕೌಟ್ ಸಂಸ್ಥೆಯಲ್ಲಿ ಪ್ರತಿಯೊಬ್ಬರು ಧರಿಸುವ ಸ್ಕಾರ್ಫ್ ಸ್ಕೌಟ್‌ನ ಅಧಿಕೃತ ಗುರುತಾಗಿದೆ. ಇದು ವಿಶ್ವದಾದ್ಯಂತ ಗುರುತಿಸಲ್ಪಡುವ ಗುರುತಾಗಿದೆ. ಒಮ್ಮೆ ಸ್ಕೌಟ್ ಅಥವಾ ಗೈಡ್ ಆದರೆ ಅವರು ಯಾವಾಗಲೂ ಸ್ಕೌಟ್ ಅಥವಾ ಗೈಡ್ ಆಗಿರುತ್ತಾರೆ ಎಂದು ಹೇಳಿದರು.
ವಿಶ್ವ ಸ್ಕಾರ್ಫ್ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಸ್ಕೌಟ್ ಮತ್ತು ಗೈಡ್‌ನ ಪ್ರತಿಜ್ಞಾವಿಧಿಯನ್ನು ಬೋಧಿಸಿದರು ಮತ್ತು ಶಾಲಾ ಆಡಳಿತ ಮಂಡಳಿಯವರಾದ ಹೇಮಂತ್ ಗೌಡ ಅವರಿಗೆ ಸ್ಕಾರ್ಪ್ ಹಾಕಿ ಸ್ಕೌಟ್ ವಾರ್ಷಿಕ ಯೋಜನಾ ಪುಸ್ತಕವನ್ನು ನೀಡಿದರು.
ಶಾಲೆ ಮುಖ್ಯ ಶಿಕ್ಷಕ ಯೋಗೇಶ್ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒಂದು ಶಾಲೆಯು ಹೇಗೆ ಶ್ರಮಿಸುತ್ತದೆಯೋ ಹಾಗೆಯೇ ಸದೃಢ ಸಮಾಜ ನಿರ್ಮಿಸುವುದರಲ್ಲಿ ವಿದ್ಯಾರ್ಥಿ ದಿಸೆಯಿಂದಲೇ ಮಕ್ಕಳನ್ನು ತಯಾರು ಮಾಡುವಲ್ಲಿ ಸ್ಕೌಟ್ ಸಂಘದ ಪಾತ್ರ ಮಹತ್ವದ್ದು ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿ ಹೇಮಂತ್‌ಗೌಡ, ಪ್ರಮುಖರಾದ ದಿವ್ಯಶ್ರೀ ಉಪಸ್ಥಿತರಿದ್ದರು.