ಪ್ರತಿಯೊಬ್ಬರಲ್ಲೂ ನಮ್ಮ ನೆಲ, ನಮ್ಮ ದೇಶವೆಂಬ ಸಾಮಾಜಿಕ ಕಳಕಳಿ ಇರಲಿ

sasi
ಕೊಪ್ಪಳ ತಾಲೂಕಿನ ಗಿಣಿಗೇರಿ ಕೆರೆಯಲ್ಲಿ ಬುಧವಾರ ಗಿಡ ನೆಡಲಾಯಿತು. ತಾಪಂ ಇಒ ದುಂಡಪ್ಪ ತುರಾದಿ, ನರೇಗಾ ಸಹಾಯಕ ನಿರ್ದೇಶಕಿ ಸೌಮ್ಯ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಗುರುನಗೌಡ, ಗ್ರಾಪಂ ಉಪಾಧ್ಯಕ್ಷ ಕರಿಯಪ್ಪ ಮೇಟಿ, ಉಪವಲಯ ಅರಣ್ಯಾಧಿಕಾರಿಗಳಾದ ಎಂ.ಉಮೇಶ, ಅಬ್ದುಲ್ ಸಮಿ ಇದ್ದರು.
Published on

ಕೊಪ್ಪಳ: ಪ್ರತಿಯೊಬ್ಬರಿಗೂ ನಮ್ಮ ನೆಲ, ನಮ್ಮ ದೇಶ ಎನ್ನುವ ಸಾಮಾಜಿಕ ಕಳಕಳಿ ಮುಖ್ಯ ಎಂದು ತಾಪಂ ಇಒ ದುಂಡಪ್ಪ ತುರಾದಿ ಹೇಳಿದರು.

ತಾಲೂಕಿನ ಗಿಣಿಗೇರಿ ಕೆರೆ ದಡದಲ್ಲಿ ನಮ್ಮ ನೆಲ, ನಮ್ಮ ದೇಶ ಕಾರ್ಯಕ್ರಮದಡಿ ಬುಧವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದರು.

ಸ್ವಾತಂತ್ರೃ ದಿನದ ಅಂಗವಾಗಿ ಆ.9ರಿಂದ 15ವರೆಗೆ ಗ್ರಾಪಂ ಮಟ್ಟದಲ್ಲಿ ಅಮೃತ ಮಹೋತ್ಸವ, ಅರಣ್ಯ ಇಲಾಖೆ ಸಹಯೋಗದಲ್ಲಿ ವಿವಿಧ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತಿಯೊಬ್ಬರೂ ದೇಶ ಪ್ರೇಮ, ಪರಿಸರ ಕಾಳಜಿ ಹೊಂದಬೇಕು. ಸಾಧ್ಯವಾದಷ್ಟು ಸಸಿಗಳನ್ನು ಬೆಳೆಸಬೇಕು. ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಸಬೇಕೆಂದರು.


ತಾಪಂ ನರೇಗಾ ಸಹಾಯಕ ನಿರ್ದೇಶಕಿ ಸೌಮ್ಯಾ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಗುರುನಗೌಡ, ಗ್ರಾಪಂ ಉಪಾಧ್ಯಕ್ಷ ಕರಿಯಪ್ಪ ಮೇಟಿ, ಉಪವಲಯ ಅರಣ್ಯಾಧಿಕಾರಿಗಳಾದ ಎಂ.ಉಮೇಶ, ಅಬ್ದುಲ್ ಸಮಿ, ಅರಣ್ಯ ಗಸ್ತು ಪಾಲಕ ಖಾಜಾ ಅತ್ತಾರ, ಪಿಡಿಒ ಮಂಜುಳಾದೇವಿ ಹೂಗಾರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕ ಯಮನೂರಪ್ಪ, ಕಾರ್ಯದರ್ಶಿ ಮಂಜುನಾಥ, ರವಿಕುಮಾರ ಹಲಗೇರಿ, ಗ್ರಾಮಸ್ಥರಾದ ನೀಲಪ್ಪ ಮೂರುಮನೆ, ಹನಮೇಶ್ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net