ಪ್ರತಿಯೊಬ್ಬರಲ್ಲಿಯೂ ದೇಶಪ್ರೇಮ ಜಾಗೃತಗೊಳ್ಳಲಿ

ARD1
ಔರಾದ್ ತಹಸಿಲï ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಗುರುವಾರ ಆಯೋಜಿಸಿದ್ದ ಸ್ವಾತಂತ್ರÈದಿನಾಚರಣೆಯಲ್ಲಿ ಶಾಸಕ ಪ್ರಭು ಚವ್ಹಾಣ್ ಧ್ವಜವಂದನೆ ಸ್ವೀಕರಿಸಿದರು. ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ದೊಂಡಿಬಾ ನರೋಟೆ, ಬೀರೇಂದ್ರಸಿAಗ್ ಠಾಕೂರ್, ಸ್ವಾಮಿದಾಸ, ಶಿವಕುಮಾರ ಘಾಟೆ, ವೆಂಕಟೇಶ ಶಿಂಧೆ, ರವೀಂದ್ರ, ಧೂಳಪ್ಪ ಇತರರಿದ್ದರು.
Published on

ಔರಾದ್: ಪರಕೀಯರ ಆಳ್ವಿಕೆಯಿಂದ ಮುಕ್ತಿಗೊಳಿಸಿ ದೇಶವನ್ನು ಸ್ವಾತಂತ್ರÈಗೊಳಿಸಲು ಅಸಂಖ್ಯಾತ ಹೋರಾಟಗಾರರು ತ್ಯಾಗ ಬಲಿದಾನ ಮಾಡಿz್ದÁರೆ. ಅವರ ಹೋರಾಟಸ್ಮರಿಸಬೇಕು. ದೇಶದ ಪ್ರತಿಯೊಬ್ಬರಲ್ಲಿಯೂ ದೇಶಪ್ರೇಮ ಜಾಗೃತಗೊಳ್ಳಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.

ತಾಲೂಕು ಆಡಳಿತದಿಂದ ಪಟ್ಟಣದ ತಹಸಿಲï ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅಧ್ಯP್ಷÀತೆ ವಹಿಸಿ ಮಾತನಾಡಿದ ಅವರು, ಮಹಾತ್ಮಗಾಂಧಿ, ಸುಭಾಷಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲï, ವೀರ ಸಾವರ್ಕರ್, ಬಾಲ ಗಂಗಾಧರ ತಿಲಕ, ಭಗತಸಿಂಗ್, ಚಂದ್ರಶೇಖರ ಆಜಾದ್, ರಾಜಗುರು, ಸುಖದೇವರಂತಹ ಅನೇಕ ಹೋರಾಟಗಾರರು ತಮ್ಮ ಜೀವನವನ್ನೇ ದೇಶಕ್ಕಾಗಿ ಮುಡಿಪಾಗಿಟ್ಟಿದ್ದರು. ಅಂತಹ ದೇಶದಲ್ಲಿ ಹುಟ್ಟಿದಕ್ಕೆ ಗರ್ವಪಡಬೇಕು ಎಂದು ಹೇಳಿದರು.

ತಹಸೀಲ್ದಾರ ಮಲಶೆಟ್ಟಿ ಚಿದ್ರೆ ಧ್ವಜಾರೋಹಣ ನೆರವೇರಿಸಿದರು. ಶಿP್ಷÀಕ ಸಂಜೀವಕುಮಾರ ಬಿರಾದಾರ ಸ್ವಾತಂತ್ರÈ ದಿನದ ಕುರಿತು ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರಗಳ ಸಾಧಕ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.

ಎಪಿಎಂಸಿ ಅಧ್ಯP್ಷÀ ದೊಂಡಿಬಾ ನರೋಟೆ, ತಾಪಂ ಇಒ ಬೀರೇಂದ್ರಸಿAಗ್ ಠಾಕೂರ್, ಕ್ಷೇತ್ರ ಶಿP್ಷÀಣಾಧಿಕಾರಿ ಸುಧಾರಾಣಿ, ಪೊಲೀಸ್ ವೃತ್ತ ನಿರೀP್ಷÀಕ ರಘುವೀರಸಿಂಗ್ ಠಾಕೂರ್, ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ, ಶಿವಕುಮಾರ ಘಾಟೆ, ವೆಂಕಟೇಶ ಶಿಂಧೆ, ಡಾ.ಗಾಯತ್ರಿ, ರವೀಂದ್ರ, ಧೂಳಪ್ಪ ಹಾಗೂ ಅಧಿಕಾರಿಗಳು, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿP್ಷÀಕರು, ಮುಖಂಡರು ಹಾಗೂ ಸಾರ್ವಜನಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net