ಪ್ರತಿಭೆಗಳ ಪ್ರದರ್ಶನಕ್ಕೆ ವೇದಿಕೆ ನಿರ್ಮಾಣ

web3
ಬೈಲಹೊಂಗಲ ಕಲ್ಪವೃಕ್ಷ ಮಾದರಿ ಶಾಲೆಯಲ್ಲಿ ಮಕ್ಕಳು 12ನೇ ಶತಮಾನದ ಶರಣರ ಕೊಡುಗೆ ಕುರಿತು ನಾಟಕ ಪ್ರದರ್ಶಿಸಿದರು.
Published on

ಬೈಲಹೊಂಗಲ: ಕಲ್ಪವೃಕ್ಷ ಮಾದರಿ ಶಾಲೆಯಲ್ಲಿ ಮಕ್ಕಳ ಪ್ರತಿಭೆಗಳ ಪ್ರದರ್ಶನಕ್ಕೆ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಿಕ್ಷಣ ಸಂಯೋಜಕ ಪ್ರಕಾಶ ಮಾಸ್ತಿಹೊಳಿ ಹೇಳಿದರು.

ಪಟ್ಟಣದ ಕಲ್ಪವೃಕ್ಷ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಮಗ್ರ ವಿಷಯಗಳ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿ, ಮಕ್ಕಳ ಸಮಗ್ರ ಅಭಿವೃದ್ಧಿಗೆ ಶಿಕ್ಷಣ, ಕ್ರೀಡೆ, ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಅವಶ್ಯವಾಗಿವೆ ಎಂದರು.

ಚಂದ್ರಯಾನ, ಸೂರ್ಯಯಾನ, ಮಳೆ ನೀರು ಸಂಗ್ರಹಣೆ ಹಾಗೂ ಮರು ಬಳಕೆ, ದಿನನಿತ್ಯದ ಜೀವನದಲ್ಲಿ ಗಣಿತ, ನಿರುಪಯುಕ್ತ ವಸ್ತುಗಳ ಮರುಬಳಕೆ, ಸ್ಮಾರಕಗಳ ಮಹತ್ವ ಹಾಗೂ ರಕ್ಷಣೆ ಸೇರಿ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ಮಾಹಿತಿ ತಂತ್ರಜ್ಞಾನ ವಿಷಯಗಳ ಆಧಾರಿತ 132 ಮಾದರಿಗಳ ಮೂಲಕ ಮಕ್ಕಳು ತಾವು ಕೈಗೊಂಡ ಅಧ್ಯಯನ ವಿವರಿಸಿದರು.

ವಸ್ತು ಪ್ರದರ್ಶನ ಮಕ್ಕಳಲ್ಲಿ ಹಾಗೂ ಪಾಲಕರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ಪ್ರೇರಣೆಯಾಯಿತು. ಆಂಗ್ಲ, ಕನ್ನಡ, ಹಿಂದಿ ಭಾಷೆ ಕುರಿತ ಕಿರು ನಾಟಕಗಳು ಭಾಷೆಗಳ ಮಹತ್ವ, ಉಪಯೋಗ, ಸಾಮಾಜಿಕ ಕಳಕಳಿ ಹಾಗೂ ಜವಾಬ್ದಾರಿಗಳನ್ನು ತಿಳಿಸುವ ಮೂಲಕ ನೋಡುಗರ ಗಮನ ಸೆಳೆದವು.

ವಕೀಲ ಶ್ರೀಶೈಲ ಅಬ್ಬಾಯಿ, ಡಾ.ಮಹಾಂತೇಶ ಉಳ್ಳೆಗಡ್ಡಿ, ವಿನಯ ಬೋಳಣ್ಣವರ, ಶೋಭಾ ಮೆಕ್ಕೇದ, ವಿಜಯಕುಮಾರ ಆರಾದ್ರಿಮಠ, ಗಂಗಾಧರಗೌಡ ಪೊಲೀಸ್ ಪಾಟೀಲ, ಪ್ರವೀಣ ಹಂಚಿನಮನಿ, ಲಕ್ಷ್ಮೀ ಭಾವಿಮನಿ, ಸ್ನೇಹಲ ತುಳಜಣ್ಣವರ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು. ಪ್ರಾಚಾರ್ಯ ಹನಮೇಶ ದುಡ್ಯಾಳ, ಆಡಳಿತಾಧಿಕಾರಿ ರಾಜಶೇಖರ ಕೋತಂಬ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net