

ಕಕ್ಕೇರಾ: ಪ್ರತಿ ಮಕ್ಕಳಲ್ಲಿ ಅಗಾಧವಾದ ಪ್ರತಿಭೆ ಇದ್ದೆ ಇರುತ್ತದೆ. ಆದರೆ ಅದನ್ನು ಹೊರ ಹಾಕಲು ಮಕ್ಕಳಿಗೆ ಪ್ರತಿಭಾ ಕಾರಂಜಿಯAತಹ ಕರ‍್ಯಕ್ರಮ ಸೂಕ್ತ ವೇದಿಕೆಯಾಗಿದೆ ಎಂದು ವಲಯ ಬಿಆರ್‌ಪಿ ರವಿ ಕನಕರಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡ ಪ್ರಸಕ್ತ ಸಾಲಿನ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಮಾತನಾಡಿದ ಅವರು, ಎಲ್ಲ ಮಕ್ಕಳಲ್ಲಿ ಅಗಾಧವಾದ ಪ್ರತಿಭೆ ಅಡಗಿರುತ್ತದೆ. ಅದು ಹೊರ ಹಾಕಲು ಪ್ರತಿಭಾ ಕಾರಂಜಿಯAತಹ ಕರ‍್ಯಕ್ರಮ ಸೂಕ್ತ ವೇದಿಕೆಯಾಗಿದ್ದು, ಮಕ್ಕಳು ಈ ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಸಿಆರ್‌ಪಿ ಶಿವಲೀಲಾ ಹಿರೇಮಠ ಪ್ರಾಸ್ತಾವಿಕ ಮಾತನಾಡಿ, ಪ್ರತಿಭಾ ಕಾರಂಜಿಯಲ್ಲಿ ಸ್ಪರ್ಧಿಸುವ ಮಕ್ಕಳ ಪ್ರತಿಭೆಯನ್ನು ಶಿಕ್ಷಕರು ಪ್ರಾಮಾಣಿಕವಾಗಿ ಗುರುತಿಸಬೇಕು ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಸಣ್ಣಅಯ್ಯಾಳಪ್ಪ ಪೂಜಾರಿ ದೀಪ ಬೆಳಗಿಸುವ ಮೂಲಕ ಕರ‍್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯಗುರು ರಂಜಾನ್ ಲೋಣಿ ಅಧ್ಯಕ್ಷತೆ ವಹಿಸಿದ್ದರು. ಗುಂಡಪ್ಪ ಸೊಲಾಪುರ, ಪುರಸಭೆ ಸದಸ್ಯರಾದ ಪರಮಣ್ಣ ಕಮತಗಿ, ಪರಶುರಾಮ ಗೋವಿಂದರ್, ಸದ್ದಾಂ ಹುಸೇನ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಸಂಗೀತಾ ಸ್ವಾಮಿ, ಕಸಾಪ ಅಧ್ಯಕ್ಷ ಕೆ.ಗವಿಸಿz್ದೆÃಶ ಹೊಗರಿ, ಎಸ್‌ಡಿಎಂಸಿ ಸದಸ್ಯ ಆನಂದ ಬೋವಿ, ಶಿಕ್ಷಕರಾದ ಶಿವಕುಮಾರ ಹಿರೇಮಠ, ಬಸವರಾಜ ಗುತ್ತೇದಾರ್, ಅಮರೇಶ ಕಾನಗುಂಡಿ, ಸಂಗನಗೌಡ ಧನರಡ್ಡಿ, ಚನ್ನಯ್ಯಸ್ವಾಮಿ, ಧನಸಿಂಗ್ ರಾಠೋಡ್, ಬಸಪ್ಪ ಬಡಿಗೇರ ಇತರರಿದ್ದರು.
ಕ್ಲಸ್ಟರ್‌ನ ಸರ್ಕಾರಿ ಕಿರಿಯ, ಹಿರಿಯ, ಪ್ರೌಢಶಾಲೆಗಳ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಛದ್ಮವೇಶ, ಜಾನಪದ ನೃತ್ಯ, ಕವ್ವಾಲಿ, ರಸಪ್ರಶ್ನೆ, ಗಝಲ್, ಮಿಮಿಕ್ರಿ, ಕೋಲಾಟ, ವೈಯಕ್ತಿಕ ಆಟೋಟ ಸೇರಿ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನ ಸೆಳೆದರು.
ರವಿ ಭಜಂತ್ರಿ ಸ್ವಾಗತಿಸಿದರು. ರಿಜುವಾನಾ ಬೇಗಂ ವಂದಿಸಿದರು. ಬಸವರಾಜ ಹೊಸಮನಿ ನಿರೂಪಣೆ ಮಾಡಿದರು.