ಪ್ರತಿಭೆ ಮೆರೆದ ವಡಗೇರಾ ಮಕ್ಕಳು

1209wdgr01
ಹೈದರಾಬಾದ್‌ನಲ್ಲಿ ನಡೆದ ಅಂತಾರಾಷ್ಟಿçÃಯಾ ಕರಾಟೆ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ ಪಟ್ಟಣದ ಕಸ್ತೂರಬಾ ಬಾಲಕಿಯರ ವಸತಿ ಶಾಲೆ ವಿದ್ಯಾರ್ಥಿನಿಯರು. ಮುಖ್ಯಶಿಕ್ಷಕಿ ಪಿ.ಬಿ.ಗಾಯಿತ್ರಿ, ನಿಲಯ ಪಾಲಕಿ ಚಂದ್ರಕಲಾ, ಕರಾಟೆ ಶಿಕ್ಷಕ ಸುನಿಲ್ ವಿಶ್ವಕರ್ಮ, ತರಬೇತಿದಾರ ಶ್ರೀಕಾಂತ ಮಾಸ್ಟರ್ ಇತರರಿದ್ದರು.
Published on

ವಡಗೇರಾ: ಹೈದರಾಬಾದ್‌ನ ಕೋಟ್ಲಾ ವಿಜಯಭಾಸ್ಕರ ರೆಡ್ಡಿ ಸ್ಟೇಡಿಯಂನಲ್ಲಿ ಗ್ಲೋಬಲ್ ಶೋಟೋಕಾನ್ ಕರಾಟೆ-ಡು-ಇಂಡಿಯಾ ಇತ್ತೀಚೆಗೆ ಹಮ್ಮಿಕೊಂಡಿದ್ದ ಐದನೇ ವರ್ಷದ ಅಂತಾರಾಷ್ಟೀಯ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಪಟ್ಟಣದ ಕಸ್ತೂರಬಾ ಬಾಲಕಿಯರ ವಸತಿ ಶಾಲೆ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ೧೭ ವಿದ್ಯಾರ್ಥಿನಿಯರಲ್ಲಿ ೧೨ ಜಯಶಾಲಿಯಾಗಿದ್ದಾರೆ. ಅಯ್ಯಮ್ಮ ಮತ್ತು ರೇಖಾ ಬಂಗಾರದ ಪದಕ ಪಡೆದರೆ, ಮಾಯಮ್ಮ, ಲಕ್ಷ್ಮೀ, ಮರಿಲಿಂಗಮ್ಮ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ. ಇನ್ನುಳಿದವರು ೩ ಮತ್ತು ೪ನೇ ಸ್ಥಾನದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಮಕ್ಕಳ ಸಾಧನೆಗೆ ಯಾದಗಿರಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಸಂತಸ ವ್ಯಕ್ತಪಡಿಸಿದ್ದಾರೆ. ಮುಖ್ಯಶಿಕ್ಷಕಿ ಪಿ.ಬಿ.ಗಾಯಿತ್ರಿ, ನಿಲಯ ಪಾಲಕಿ ಚಂದ್ರಕಲಾ, ಕರಾಟೆ ಶಿಕ್ಷಕ ಸುನಿಲ್ ವಿಶ್ವಕರ್ಮ, ತರಬೇತುದಾರ ಶ್ರೀಕಾಂತ ಮಾಸ್ಟರ್, ಸಂಗೀತಾ, ಶಾಂತಾ ಎನ್. ಜಡಿ, ದಿಲ್‌ಶಾದ್, ಪವಿತ್ರಾ ಸಾಧಕ ಮಕ್ಕಳೊಂದಿಗೆ ಸಂಭ್ರಮ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net