

ಕಬ್ಬೂರ: ಗ್ರಾಮೀಣ ಪ್ರತಿಭೆಗಳು ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಪ್ರತಿಭೆ ಪ್ರದರ್ಶಿಸಿದಲ್ಲಿ ಮಾತ್ರ ರಾಜ್ಯಮಟ್ಟದಲ್ಲಿ ಸ್ಪರ್ಧಿಸಲು ಅವಕಾಶ ಸಿಗಲು ಸಾಧ್ಯ ಎಂದು ಕೆಪಿಸಿಸಿ ಯುವಘಟಕದ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ ಹೇಳಿದರು.
ಸಮೀಪದ ಜಾಗನೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಾಗನೂರ ಪ್ರೀಮಿಯರ್ ಲೀಗ್, ರಾಹುಲ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಈಚೆಗೆ ಚಾಲನೆ ನೀಡಿ ಮಾತನಾಡಿದರು.
ಮಹಾವೀರ ಮೊಹಿತೆ, ಶಿವು ಪಾಟೀಲ, ಪುಟ್ಟು ಪಾಟೀಲ, ಶಿವಾನಂದ ರ‍್ಯಾಯಿ, ಗಣೇಶ ಮೊಹಿತೆ, ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಮಂಗಿ, ಲಕ್ಷ್ಮಣ ಹನಮನ್ನವರ, ಮಲ್ಲೇಶ ಹನಮಂತಗೋಳ, ಪಿಕೆಪಿಎಸ್ ಅಧ್ಯಕ್ಷ ಹನುಮಂತ ಕರಿಕಟ್ಟಿ, ರಂಗನಾಥ ಗಿಡ್ಡಪ್ಪಗೋಳ, ಸುರೇಶ ಹಂಜಿ ಇತರರಿದ್ದರು.