ಪ್ರತಿಭೆ ಅನಾವರಣಕ್ಕೆಪ್ರತಿಭಾ ಕಾರಂಜಿ ಸಹಕಾರಿ

CTD 31 PRATIBE (1)
Published on


ಚಿತ್ರದುರ್ಗ: ಮಕ್ಕಳಲ್ಲಿರುವ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸಹಕಾರಿ ಎಂದು ಶಿಕ್ಷಣ ಸಂಯೋಜಕ ರಮೇಶ್‌ರೆಡ್ಡಿ ಹೇಳಿದರು. ಶಿಕ್ಷಣ ಇ ಲಾಖೆ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಕಚೇರಿ ಹಾಗೂ ಗೋನೂರು ಗ್ರಾಪಂ ಸಹಯೋಗದಲ್ಲಿ ಚಿತ್ರದುರ್ಗ ತಾಲೂಕು ಬಚ್ಚಬೋರನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಏರ್ಪಡಿಸಿದ್ದ ಗೋನೂರು ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಪ್ರತಿಭೆ ಅನಾವರಣಕ್ಕೆ ಪ್ರತಿಭಾಕಾರಂಜಿಯಂಥ ಕಾರ‌್ಯಕ್ರಮಗಳು ಮಕ್ಕಳಿಗೆ ಸೂಕ್ತ ವೇದಿಕೆಯನ್ನು ಒದಗಿಸುತ್ತವೆ ಎಂದರು.
ಬಿಆರ್‌ಪಿ ವಿದ್ಯಾ ಅವರು ಮಾತನಾಡಿ,ಪಠ್ಯದ ಜತೆ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ಮೂಡಿಸಿಕೊಂಡರೆ ಸಮಾಜ ಮು ಖಿ ಬೆಳವಣಿಗೆ ಸಹಕಾರಿಯಾಗುತ್ತದೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷೆ ನಿರ್ಮಲಾ ಅವರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಗಾಯತ್ರಿ, ಸದಸ್ಯರಾದ ಮಂಜುಳಾ,ತಾಯಮ್ಮ,ಸಿಆರ್‌ಪಿ ರಮೇಶ್, ಮಂಗಳಗೌರಮ್ಮ,ಶ್ಯಾಮಲಾ,ಗ್ರಾಮದ ಮುಖಂಡರು,ಕ್ಲಷ್ಟರ್ ವ್ಯಾಪ್ತಿ ಮುಖ್ಯ ಶಿಕ್ಷಕರು,ಶಿಕ್ಷಕರು ಇದ್ದರು. ಮುಖ್ಯಶಿಕ್ಷಕ ಜಿ.ರಂಗಸ್ವಾಮಿ ಸ್ವಾಗತಿಸಿ,ಶಿಕ್ಷಕಿ ಪುಷ್ಪಾ ಅವರು ನಿರೂಪಿಸಿದರು. ಮುಕ್ತಬಾಯಿ ಅವರು ವಂದಿಸಿ ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net