ಪ್ರತಿಭೆ ಅನಾವರಣಕ್ಕೆ ಕ್ರೀಡಾಕೂಟ ವೇದಿಕೆ

web7
ಎಂ.ಕೆ.ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದ ವಲಯ ಮಟ್ಟದ ಕ್ರೀಡಾಕೂಟವನ್ನು ಶಾಸಕ ಬಾಬಾಸಾಹೇಬ ಪಾಟೀಲ ಉದ್ಘಾಟಿಸಿದರು. ಪ್ರಕಾಶ ಅಬಡನವರ, ವಿಜಯಲಕ್ಷ್ಮೀ ಕಮ್ಮಾರ, ಗಾಯತ್ರಿ ಅಜ್ಜನ್ನವರ ಇತರರು ಇದ್ದರು.
Published on

ಎಂ.ಕೆ.ಹುಬ್ಬಳ್ಳಿ: ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆ ಅನಾವರಣಕ್ಕೆ ಕ್ರೀಡಾಕೂಟಗಳು ಉತ್ತಮ ವೇದಿಕೆಯಾಗಿದ್ದು, ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎಂ.ಕೆ.ಹುಬ್ಬಳ್ಳಿ ವಲಯ ಮಟ್ಟದ ಕ್ರೀಡಾಕೂಟ ಮತ್ತು ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು. ಸ್ಪರ್ಧೆಯಲ್ಲಿ ಸೋಲು-ಗೆಲುವು ಲೆಕ್ಕಿಸದೆ, ನಿರಂತರ ಪ್ರಯತ್ನದಿಂದ ಸಾಧನೆಯತ್ತ ಸಾಗಬೇಕು. ರಾಜ್ಯ, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕೆಂದರು.

ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ ಅಬಡನವರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವಿಜಯಲಕ್ಷ್ಮೀ ಕಮ್ಮಾರ, ಪ್ರಭಾರಿ ಬಿಇಒ ಗಾಯತ್ರಿ ಅಜ್ಜನ್ನವರ, ಜಿಪಂ ಮಾಜಿ ಸದಸ್ಯ ಫಕೀರಪ್ಪ ಸಕ್ರೆನ್ನವರ, ಎಎಸ್‌ಐ ಗಂಗಾಧರ ಹಂಪನ್ನವರ, ಶ್ರೀಶೈಲ ತಿಗಡಿ, ಎನ್.ಸಿ.ಗಣಾಚಾರಿ, ಲಕ್ಷ್ಮಣ ಗೋಕಾರ, ಡಾ. ಜಗದೀಶ ಹಾರುಗೊಪ್ಪ, ಜಿ.ಎಸ್.ಹಲಸಗಿ, ಶೇಖರ ಹಲಸಗಿ, ರುದ್ರಪ್ಪ ಸಂಗೋಳ್ಳಿ, ರುದ್ರಪ್ಪ ಕರವಿನಕೊಪ್ಪ, ಶಂಕರಯ್ಯ ಶಹಪೂರಮಠ, ಎಂ.ಎಸ್.ಕಲ್ಮಠ, ವಿನೋದ ಪಾಟೀಲ, ರಾಜು ಮೇಳದ, ವಿಠ್ಠಲ ನನ್ನೂರ, ಎಸ್.ಎನ್.ಹುಬ್ಬಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net